ಬ್ಯೂನಸ್ ಐರಿಸ್ (ಆರ್ಜೆಂಟೀನಾ): ಸ್ಪೇನ್‌ನ ಅಗ್ರ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕರಾಜ್ “ಆರ್ಜೆಂಟೀನಾ ಓಪನ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವದ ನಂ. 2 ಆಟಗಾರನಾಗಿರುವ ಕಾರ್ಲೋಸ್ ಅಲ್ಕರಾಜ್ ಫೈನಲ್‌ನಲ್ಲಿ ನಂ. 12ನೇ ಆಟಗಾರ, ಬ್ರಿಟನ್‌ನ ಕ್ಯಾಮರಾನ್ ನೂರಿ ವಿರುದ್ಧ 6-3, 7-5 ನೇರ ಸೆಟ್‌ಗಳ ಜಯ ಸಾಧಿಸಿದರು. ಇದು ಯುಎಸ್ ಓಪನ್ ಚಾಂಪಿಯನ್ ಎನಿಸಿಕೊಂಡ ಬಳಿಕ ಅಲ್ಕರಾಜ್ ಗೆದ್ದ ಮೊದಲ ಪ್ರಶಸ್ತಿಯಾಗಿದೆ.
19 ವರ್ಷದ ಅಲ್ಕರಾಝ್ ಈ ಕೂಟದಲ್ಲಿ ಕೇವಲ ಒಂದು ಸೆಟ್ ಮಾತ್ರ ಕಳೆದುಕೊಂಡಿದ್ದರು. ಅದು ಸರ್ಬಿಯಾದ ಲಾಸ್ಲೊ ಡಿಜೆರೆ ವಿರುದ್ಧದ ಪಂದ್ಯವಾಗಿತ್ತು. ಅಲ್ಕರಾಜ್ ಇನ್ನು “ರಿಯೋ ಓಪನ್’ನಲ್ಲಿ ಸ್ಪರ್ಧಿಸಲಿದ್ದಾರೆ. ಅಲ್ಲಿ ಇವರು ಹಾಲಿ ಚಾಂಪಿಯನ್ ಆಗಿದ್ದಾರೆ.