Advertisement
12 ಮಂದಿಯನ್ನು ಪಾರು ಮಾಡಲಾಗಿದ್ದು, ಉಳಿದ 8 ಮಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.ಜಪಾನಿನ ನಾಗಸಾಕಿಯಿಂದ 160 ಕಿ.ಮೀ ಹಾಗೂ ದ. ಕೊರಿಯಾದಿಂದ 150 ಕಿ.ಮೀ.
Related Articles
Advertisement
ಕಾಣೆಯಾಗಿರುವ ಸಿಬ್ಬಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. 6,551 ಟನ್ ತೂಕವಿದ್ದ ಜಿನ್ ಟಿಯಾನ್ ಎನ್ನುವ ಹಡಗು ಮುಳುಗಡೆಯಾಗಿದೆ ಎನ್ನಲಾಗಿದ್ದು, ಇದು ಹಾಂಗ್ ಕಾಂಗ್ ಮೂಲದ ಲಾಂಗ್ ಬ್ರೈಟ್ ಶಿಪ್ಪಿಂಗ್ ಲಿಮಿಟೆಡ್ ಸಂಸ್ಥೆಗೆ ಸೇರಿದ್ದು ಎನ್ನಲಾಗಿದೆ.
ಸಂಕಷ್ಟ ಕರೆ ಬಂದ ಬಳಿಕ ಮುಳುಗಡೆಮಂಗಳವಾರ ತಡರಾತ್ರಿ 11.15ರ ಸಮಯಕ್ಕೆ ಹಡಗಿನಿಂದ ಕರಾವಳಿ ಭದ್ರತಾಪಡೆಗೆ ಅಪಾಯದ ಕರೆ ಬಂದಿದೆ. ಆದರೆ, ಪ್ರದೇಶದಲ್ಲಿ ಗಂಟೆಗೆ 56 ಕಿ.ಮೀ ವೇಗದಲ್ಲಿ 13 ಅಡಿ ಎತ್ತರದಲ್ಲಿ ಗಾಳಿ ಬೀಸುತ್ತಿದ್ದ ಕಾರಣ, ಅಲರ್ಟ್ ನೀಡಿದದ ಹಿನ್ನೆಲೆ ಪಾರುಗಾಣಿಕೆ ಕಾರ್ಯಾಚರಣೆಗೆ ತೆರಳಲು ಸಾಧ್ಯವಾಗಿಲ್ಲ. ಬುಧವಾರ ಬೆಳಗ್ಗಿನ ಜಾವ 2.41ರ ಸಮಯಕ್ಕೆ ಹಡಗಿನ ಕ್ಯಾಪ್ಟನ್, ಸ್ಯಾಟ್‌ಲೆçಟ್ ಕರೆ ಮಾಡಿದ್ದು, ಹಡಗು ಮುಳುಗುತ್ತಿರುವ ಹಿನ್ನೆಲೆ ಸಿಬ್ಬಂದಿ ದ್ವೀಪಕ್ಕೆ ಜಿಗಿಯಲು ನಿರ್ಧರಿಸಿದ್ದಾರೆ ಎಂದು ಕೊನೆಯ ಸಂವಹನ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. -ದ್ವೀಪದಲ್ಲಿ ಕಾರ್ಗೋ ಹಡಗು ಮುಳುಗಡೆ
– 14 ಚೀನಿ, 8ಮ್ಯಾನ್ಮಾರ್ ಪ್ರಜೆಗಳಿದ್ದ ಹಡಗು
– 5 ಚೀನಿಯರು ಅಪಾಯದಿಂದ ಪಾರು
– ತೀವ್ರ ಗಾಳಿ ಹಿನ್ನೆಲೆ ಮುಳುಗಡೆ ಸಾಧ್ಯತೆ