ಕೋಸ್ಟ ರಿಕ: ಕೇಂದ್ರೀಯ ಅಮೆರಿಕದ ಕೋಸ್ಟರಿಕ ದೇಶದಲ್ಲಿ ಗುರುವಾರ ಸರಕು ವಿಮಾನ ತುರ್ತು ಭೂ ಸ್ಪರ್ಶ ಮಾಡುವ ವೇಳೆ ಎರಡು ತುಂಡಾಗಿ ಬಿದ್ದಿರುವ ಘಟನೆ ನಡೆದಿದೆ.
ಸ್ಯಾನ್ ಜೋಸ್‌ನ ಹೊರವಲಯದಲ್ಲಿರುವ ಸಂತ ಮರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ಬೆಳಗ್ಗೆ 10.30ಕ್ಕೆ ಡಿಎಚ್‌ಎಲ್ ಬೋಯಿಂಗ್ 757 ವಿಮಾನ ಹೊರಟಿತ್ತು.
ಆದರೆ ವಿಮಾನದಲ್ಲಿ ತಾಂತ್ರಿಕ ತೊಂದರೆಯಿದ್ದಿದ್ದರಿಂದಾಗಿ ವಿಮಾನ ಹೊರಟ 25 ನಿಮಿಷಗಳಲ್ಲೇ ಅದನ್ನು ವಾಪಸು ವಿಮಾನ ನಿಲ್ದಾಣಕ್ಕೆ ಬರುವಂತೆ ಸೂಚಿಸಲಾಗಿತ್ತು.
ಇದನ್ನೂ ಓದಿ:ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ
ತುರ್ತು ಭೂ ಸ್ಪರ್ಶ ಮಾಡುವ ವೇಳೆ ವಿಮಾನ ರನ್ ವೇನಿಂದ ಹೊರನಡೆದಿದೆ. ಹಾಗೆಯೇ ವಿಮಾನದ ಮಧ್ಯಭಾಗದಲ್ಲಿ ಸರಿಯಾಗಿ ತುಂಡಾಗಿದೆ. ವಿಮಾನದಲ್ಲಿ ಇಬ್ಬರು ಸಿಬ್ಬಂದಿಯಿದ್ದು, ಅವರಿಬ್ಬರು ಸುರಕ್ಷಿತರಾಗಿದ್ದಾರೆ.