ಭಾಲ್ಕಿ: ಪ್ರಾಥಮಿಕ ಶಿಕ್ಷಣ ತುಂಬಾ ಮಹತ್ವದ್ದಾಗಿದೆ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಿಷ್ಕಾಳಜಿ ವಹಿಸದೆ, ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ಶ್ರಮ ವಹಿಸಬೇಕು ಎಂದು ಮುಖ್ಯಶಿಕ್ಷಕಿ ಶಾಮಲಾ ಹೂಗಾರ ಹೇಳಿದರು.
ತಾಲೂಕಿನ ಬರದಾಪುರ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಸ್ತಕ ಮತ್ತು ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಗುಣಾತ್ಮಕ ಶಿಕ್ಷಣ ಮಗುವಿಗೆ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮ ಜಾರಿಗೆ
ತಂದಿದೆ. ಅವುಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಬೇಕಿದೆ.
ಮಕ್ಕಳ ಶಾಲಾ ದಾಖಲಾತಿಗಾಗಿ ಜಾಗೃತಿ ಮೂಡಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರುವಂತೆ ಶಿಕ್ಷಕರು ಕಾರ್ಯನಿರ್ವಹಿಸಬೇಕಾಗಿದೆ. ಶಿಕ್ಷಕರು ಸಮಯ ಪಾಲನೆಗೆ ಮಹತ್ವ ನೀಡಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಇದೇ ವೇಳೆ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡುವ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಿದರು ಮತ್ತು ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಬಗ್ಗೆ ಪಾಲಕರೊಂದಿಗೆ ಚರ್ಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಶಿವರಾಜ ಘೋದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಮಂತ ಸಿಕ್ಯಾನಪೂರೆ, ಇಂದ್ರಸೇನ ನಿಜಲಿಂಗೆ, ಚಂದ್ರಪ್ಪ ರಂಜೇರೆ, ರವೀಂದ್ರ ಕಾಂಬಳೆ, ಕಾರ್ಯಕ್ರಮದಲ್ಲಿ ಸಂಗೀತಾ ಮೇತ್ರೆ, ಜನಾಬಾಯಿ ಮೇತ್ರೆ, ಗುಂಡಪ್ಪಾ ಚಟ್ಟೆ, ರಾಜಕುಮಾರ ಮೇತ್ರೆ, ಸದಾನಂದ ಬಿರಾದಾರ, ಆತ್ಮಾನಂದ ಬಿರಾದಾರ, ಮಹಾದೇವ ಪಾಟೀಲ, ಶಿವಾನಂದ ಕಾಂಬಳೆ, ಮೋವಿತಾ ಮೇತ್ರೆ ಇದ್ದರು.