Advertisement
ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ನಿವೃತ್ತ ಮುಖ್ಯ ಶಿಕ್ಷಕಮನೋಹರ ಮೇತ್ರೆ ಅವರ ಸನ್ಮಾನ, ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯ ನಿರ್ವಹಿಸಿದ್ದಾರೆ. ಅವರ ಉತ್ತಮ ಸೇವೆ ಗುರುತಿಸಿ ಶಿಕ್ಷಣ ಇಲಾಖೆಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು. ಕಲವಾಡಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯ ಪ್ರಭಾರ ವಹಿಸಿಕೊಂಡ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿಯವರೂ
ಕ್ರಿಯಾಶೀಲ ವ್ಯಕ್ತಿಗಳಾಗಿದ್ದು, ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ದುಡಿಯುತ್ತಿದ್ದಾರೆ ಎಂದರು.
Related Articles
Advertisement
ಗುರುಕುಲ ಶಿಕ್ಷಣ ಸಮುತ್ಛಯ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಮಹಾದೇವ ಪಟೆ ಮಾತನಾಡಿ, ಶಿಕ್ಷಕರಲ್ಲಿ ಕ್ಷಮಾಗುಣವಿರಬೇಕು. ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಪಾಠ ಮಾಡಬೇಕು. ಅಂತಹ ವ್ಯಕ್ತಿತ್ವ ಹೊಂದಿರುವಮನೋಹರ ಮೇತ್ರೆಯವರು 33 ವರ್ಷಗಳಕಾಲ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ನಿವೃತ್ತಿ ಜೀನವ ಸುಖಮಯವಾಗಿ ಸಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಸುಮಾರು 33 ವರ್ಷಗಳ
ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮನೋಹರ ಮೇತ್ರೆಯವರು ಆದರ್ಶ ಶಿಕ್ಷಕರಾಗಿದ್ದಾರೆ. ಅವರ ಮಾರ್ಗದರ್ಶನದಂತೆ ಮುಂದಿನ ಶಿಕ್ಷಕರೂ ಉತ್ತಮ ರೀತಿಯಿಂದ ಸೇವೆ ಸಲ್ಲಿಸಿ, ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇವೆ ಎಂದು ಹೇಳಿದರು. ಹಿರಿಯ ಶಿಕ್ಷಕ ಯುವರಾಜ ಪಾಟೀಲ, ದೀಪಕ ಗಾಯಕವಾಡ, ಶೋಭಾ ಮಾಸಿಮಾಡೆ, ಪ್ರವೀಣ ಸಿಂಧೆ, ಶಿವಶರಣಪ್ಪ ಸೊನಾಳೆ, ಸುಭಾಷ ಜಲ್ಲೆ, ಪ್ರದೀಪ ಜೊಳದಪಕೆ, ಚಂದ್ರಕಾಂತ ಬಿರಾದಾರ, ಬುದ್ಧಮ್ಮಾ ಕರಕರೆ, ಅಮೃತ ಮುದ್ದಾ, ಪರಶುರಾಮ ಕರ್ಣಂ ಉಪಸ್ಥಿತರಿದ್ದರು. ಶಿವಕುಮಾರ ವಾಡಿಕರ ಸ್ವಾಗತಿಸಿದರು. ಈಶ್ವರಿ ಐನೋಳಿ ನಿರೂಪಿಸಿದರು. ಸಂತೋಷ ಕಾಳೆ ವಂದಿಸಿದರು.