Advertisement

ಬಸರಕೋಡದಲ್ಲಿ ಬಸವೇಶ್ವರ ರಥೋತ್ಸವ

01:12 PM Apr 03, 2018 | |

ಮುದ್ದೇಬಿಹಾಳ: ತಾಲೂಕಿನ ಬಸರಕೋಡದಲ್ಲಿ ಸೋಮವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಪವಾಡ
ಬಸವೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

Advertisement

ರಥೋತ್ಸವಕ್ಕೂ ಮೊದಲು ಮಧ್ಯಾಹ್ನ ನಿಡಗುಂದಿ ಪಟ್ಟಣದಿಂದ ತೇರಿನ ಕಳಸ, ಬೆಳ್ಳಿಯ ಛತ್ರಿ, ಕಾಶಿನಕುಂಟಿ ಗ್ರಾಮದಿಂದ ಪಲ್ಲಕ್ಕಿ , ರೂಢಗಿ ಗ್ರಾಮದಿಂದ ತೇರಿನ ಮಿಣಿ ಮೆರವಣಿಗೆ ಸಮೇತ ಆಗಮಿಸಿದ್ದರು. ಮೂರುಲಿಂಗನ ದೇವಸ್ಥಾನದಿಂದ ಪವಾಡ ಬಸವೇಶ್ವರ ದೇವಸ್ಥಾನದವರೆಗೆ ಕಳಸದ ಮೆರವಣಿಗೆ ನಡೆಯಿತು. ಸಂಜೆ ಕಳಸವನ್ನು ರಥದ ಶಿಖರಕ್ಕೇರಿಸಿದ ಮೇಲೆ ವಿಶೇಷ ಪೂಜೆ ಸಲ್ಲಿಸಿ ನೂರಾರು ಶರಣರು, ಸಾವಿರಾರು ಭಕ್ತರು ಹಷೋದ್ಘಾರದೊಂದಿಗೆ ಮಹಾರಥೋತ್ಸವ ನೆರವೇರಿತು.

ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಮಹಾದೇವಿ ಪಾಟೀಲ, ನಮ್ಮ ಕಾಂಗ್ರೆಸ್‌ನ ಮುದ್ದೇಬಿಹಾಳ ಮತಕ್ಷೇತ್ರದ ಅಭ್ಯರ್ಥಿ ರಕ್ಷಿತ್‌ ವರ್ತೂರು, ಪವಾಡ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವೈ. ಬಿರಾದಾರ, ಪದಾಧಿಕಾರಿಗಳಾದ ಎಸ್‌.ಬಿ. ನಾಡಗೌಡರ, ಎಂ.ಆರ್‌. ನಾಡಗೌಡರ, ಜಾತ್ರಾ ಕಮೀಟಿ ಅಧ್ಯಕ್ಷ ಶ್ರೀಶೈಲ ಸೂಳಿಭಾವಿ, ಶ್ರೀಶೈಲ ಮೇಟಿ, ಅಪ್ಪುಧಣಿ ನಾಡಗೌಡ,
ಸಂಗನಗೌಡ ಬಿರಾದಾರ, ಅರವಿಂದ ಕೊಪ್ಪ ಇದ್ದರು.

ಮಹಾರಥೋತ್ಸವ ಹಿನ್ನೆಲೆ ದೇವಸ್ಥಾನದ ತೋಟದಲ್ಲಿ ಬೀಡು ಬಿಟ್ಟಿದ್ದ ನೂರಾರು ಶರಣ, ಶರಣೆಯರಿಗೆ ಭಕ್ತರು ಪಾದಪೂಜೆ ಸಲ್ಲಿಸಿ, ತಮ್ಮ ಮನೆಗಳಿಂದ ತಂದಿದ್ದ ಸಜ್ಜಕ, ಮಾದಲಿ ನೈವೇದ್ಯ ಅರ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next