Advertisement
ಕ್ಯಾರವಾನ್ ಎಂದರೇನು?ಹೊಟೇಲ್ ಮತ್ತು ವಾಸ್ತವ್ಯಕ್ಕೆ ಅವಕಾಶ ಇಲ್ಲದ ಸ್ಥಳಗಳಲ್ಲಿ ಕುಟುಂಬ ಅಥವಾ ಸ್ನೇಹಿತರ ಜತೆಗೆ ಮನೆಯಂಥ ಸೌಕರ್ಯಗಳನ್ನು ಹೊಂದಿರುವ ವಾಹನಗಳಲ್ಲಿ ತೆರಳುವ ವ್ಯವಸ್ಥೆಗೆ ಕ್ಯಾರವಾನ್ ಪ್ರವಾಸೋದ್ಯಮ ಎಂದು ಕೇಂದ್ರ ಸರಕಾರ ವ್ಯಾಖ್ಯಾನಿಸಿದೆ. ಈ ಉದ್ದೇಶಕ್ಕಾಗಿ ವಾಹನಗಳನ್ನೂ ವಿಶೇಷವಾಗಿ ನಿರ್ಮಿಸಲಾಗಿರುತ್ತದೆ. ಅದರಲ್ಲಿಯೇ ವಾಸ್ತವ್ಯಕ್ಕೂ ಅನುಕೂಲ ಮಾಡಿಕೊಡಲಾಗಿರುತ್ತದೆ. ಪರಿಸರ ಸಹ್ಯ, ಸಾಹಸ ರೀತಿಯ ಪ್ರವಾಸಗಳು ಹಾಗೂ ತೀರ್ಥಯಾತ್ರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ನೆರವಾಗಲಿದೆ ಎಂದೂ ಕೇಂದ್ರ ಸರಕಾರ ತಿಳಿಸಿದೆ.
ಕ್ಯಾರವನ್ ಪ್ರವಾಸೋದ್ಯಮ ಎನ್ನುವುದು ದೇಶದಲ್ಲಿ ಹಲವು ವರ್ಷಗಳ ಹಿಂದೆಯೇ ಜಾರಿಯಲ್ಲಿತ್ತು. ಸೋಂಕು ಏರಿಕೆಯಾಗಿ, ಇಳಿಮುಖವಾಗುತ್ತಿರುವ ಈ ಹಂತದಲ್ಲಿ ಅದಕ್ಕೆ ಬೇಡಿಕೆ ಬಂದಿದೆ. ಕೆಲವು ಮಂದಿ ಕಡಿಮೆ ಜನರ ನಡುವೆ ಪ್ರವಾಸದ ಅನುಭವ ಹೊಂದಲು ಇಚ್ಛಿಸುತ್ತಿದ್ದಾರೆ. ಅಂಥವರಿಗೆ ಇದು ನೆರವಾಗಲಿದೆ. ಪ್ರವಾಸಿಗರ ಅಭಿಪ್ರಾಯ ಏನು?
ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಜತೆಗೆ ಹೋದವರ ಗುಂಪಿಗೆ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರಾಮದಾಯಕವಾಗಿ ಪ್ರವಾಸ ಹಮ್ಮಿಕೊಳ್ಳಬಹುದು.
Related Articles
ಜನಪ್ರಿಯ ಪ್ರವಾಸೋದ್ಯಮ ಸ್ಥಳಗಳಲ್ಲಿಯೇ ವಸತಿಯುಕ್ತ ವಾಹನಗಳು (ಕ್ಯಾರವಾನ್) ಪಾರ್ಕ್ ಮಾಡಬೇಕಾಗುತ್ತದೆ. ಇಂಧನ, ನೀರಿನ ಪೂರೈಕೆ, ತ್ಯಾಜ್ಯ ನಿರ್ವಹಣೆಗೆ ಸೂಕ್ತ ರೀತಿಯ ವ್ಯವಸ್ಥೆಗಳನ್ನು ಹೊಂದಿರಬೇಕಾಗುತ್ತದೆ. ನಮ್ಮ ದೇಶದಲ್ಲಿ ಇಂಥ ವ್ಯವಸ್ಥೆಗಳನ್ನು ಇನ್ನಷ್ಟೇ ಅಭಿವೃದ್ಧಿಗೊಳಿಸಬೇಕಾಗಿದೆ.
Advertisement