Advertisement

ಕಾಶ್ಮೀರದಲ್ಲಿ ಕಾರು ಸ್ಕಿಡ್ ಆಗಿ 300 ಅಡಿ ಕಮರಿಗೆ ಬಿದ್ದು 8 ಮಂದಿ ಸಾವು

11:32 AM Aug 31, 2022 | Team Udayavani |

ಕಿಶ್ತ್‌ವಾರ್/ಜಮ್ಮು: ಜಮ್ಮು ಮತ್ತು ಕಿಶ್ತ್‌ವಾರ್ ಜಿಲ್ಲೆಯಲ್ಲಿ ಕಾರು ರಸ್ತೆಯಿಂದ ಸ್ಕಿಡ್ ಆಗಿ 300 ಅಡಿ ಕಮರಿಗೆ ಬಿದ್ದ ಪರಿಣಾಮ 16 ವರ್ಷದ ಬಾಲಕಿ ಸೇರಿದಂತೆ ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

Advertisement

ಕಾರು ಚಿಂಗಮ್‌ನಿಂದ ಚಾತ್ರೂಗೆ ತೆರಳುತ್ತಿತ್ತು. ಈ ವೇಳೆ ಬುಂದಾ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ 3.15 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತಪಟ್ಟ ಎಲ್ಲಾ ಪ್ರಯಾಣಿಕರು ಬುಂದಾ ಗ್ರಾಮದವರು ಎಂದು ಪೊಲೀಸರು  ತಿಳಿಸಿದ್ದಾರೆ.

ಘಟನೆ ಕುರಿತು ಸುದ್ದಿ ತಿಳಿದ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ  ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ಪರಿಹಾರ ಘೋಷಿಸಿದ್ದಾರೆ.

 

ಇದನ್ನೂ ಓದಿ:ಸೋವಿಯತ್‌ ಒಕ್ಕೂಟದ ಕೊನೆಯ ನಾಯಕ, ರಷ್ಯಾದ ಮಾಜಿ ಅಧ್ಯಕ್ಷ ಗೊರ್ಬಚೇವ್‌ ನಿಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next