Advertisement

Chandigarh: ಉದ್ಯೋಗಿಗಳಿಗೆ ಕಾರ್‌ ಉಡುಗೊರೆ !

08:57 PM Nov 04, 2023 | Team Udayavani |

ಚಂಡೀಗಢ: ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳನ್ನು ಕುಟುಂಬದ ಸದಸ್ಯರಂತೆ ಕಾಣುವ ಮಾಲೀಕರೇ ವಿರಳ ! ಅಂಥದ್ದರಲ್ಲಿ ಚಂಡೀಗಢದ ಫಾರ್ಮಾ ಸಂಸ್ಥೆಯ ಮಾಲೀಕರೊಬ್ಬರು ಉದ್ಯೋಗಿಗಳಿಗೆ ಕಾರಿನ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

Advertisement

ಪಂಚಕುಲ ಮೂಲದ ಫಾರ್ಮಾ ಸಂಸ್ಥೆಯ ಮಾಲೀಕರಾದ ಭಾಟಿಯಾ, ತಮ್ಮ 12 ಮಂದಿ ಉದ್ಯೋಗಿಗಳಿಗೆ ಟಾಟಾ ಪಂಚ್‌ ಕಾರ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪೈಕಿ ಕಚೇರಿಯ ಸಹಾಯಕ ಸಿಬ್ಬಂದಿಯೂ ಸೇರಿದ್ದಾರೆ. ಈ ಕುರಿತು ಮಾತನಾಡಿರುವ ಭಾಟಿಯಾ, ನಮ್ಮ ಸಂಸ್ಥೆಗಾಗಿ ಶ್ರದ್ಧೆಯಿಂದ ದುಡಿಯುವವರನ್ನು ನಾನು ಕಾರ್ಮಿಕರೆಂದಲ್ಲ, ಸೆಲೆಬ್ರಿಟಿಗಳಂತೆಯೇ ಕಾಣುತ್ತೇನೆ ಹಾಗೆಯೇ ಕರೆಯುತ್ತೇನೆ ! ಅದಕ್ಕಾಗಿ ಕಾರ್‌ಗಳ ಉಡುಗೊರೆ ನೀಡಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next