Advertisement
ನೆಮ್ಮದಿಯ ಮತ್ತು ಸುಖ ಪ್ರಯಾಣಕ್ಕೆ ಕಾರೊಂದು ಬೇಕೇಬೇಕು. ಬಜೆಟ್‌ಗೆ ಅನುಗುಣವಾಗಿ ಕಾರು ಖರೀದಿಸಿ ಆನಂದಿಸುವುದು ಇದ್ದೇ ಇದೆ. ಆದರೆ ಅದೇ ಕಾರು ಪ್ರಯಾಣದ ಜತೆಗೆ ನಗರದ ಆವಶ್ಯಕತೆಯ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಬೇಕಾದುದು ಅಗತ್ಯ. ಅದಕ್ಕಾಗಿಯೇ ಹ್ಯಾಚ್‌ಬ್ಯಾಕ್, ಎಸ್‌ಯುವಿ ಮಾದರಿ ಕಾರುಗಳಿಗೆ ಬೇಡಿಕೆಯೂ ಜಾಸ್ತಿ. ಜತೆಗೆ ಕಾರು ಮಾರುಕಟ್ಟೆಯಲ್ಲಿ ಹೊಸತೇನಿದೆ ಎಂಬ ಕುತೂಹಲವೂ ಯುವಕರದ್ದು.
Related Articles
ಟಾಟಾ ಕಂಪೆನಿಯವರ ಟಾಟಾ ಹೆರಿಯರ್ ಹೊಸ ಮಾದರಿಯ ಕಾರು ಯುವ ಜಮಾನಕ್ಕೆ ತಕ್ಕಂತೆಯೇ ಹೊಸತನದೊಂದಿಗೆ ಸಿದ್ಧವಾಗಿ ನಿಂತಿದೆ. ಈ ಕಾರು 2019 ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದೆ. ಆದರೆ ಬಿಡುಗಡೆಗೂಮುನ್ನವೇ ಕಾರು ಬಗ್ಗೆ ವಿಚಾರಿಸಲು ಗ್ರಾಹಕರು ಬರುತ್ತಲೇ ಇರುತ್ತಾರೆ. ಇದು ಈ ಹಿಂದಿನ ಕಾರುಗಳಿಗಿಂತ ಹೆಚ್ಚಿನ ಫೀಚರ್ಸ್ ರ್ನ್ನು ಒಳಗೊಂಡಿರುತ್ತದೆ. ಆದರೆ ಬಿಡುಗಡೆ ಸಂದರ್ಭದಲ್ಲಷ್ಟೇ ಫೀಚರ್ ಮಾಹಿತಿಗಳು ಲಭ್ಯವಾಗಲಿವೆ ಎಂದು ಹೋಂಡಾ ಮ್ಯಾಟ್ರಿಕ್ಸ್‌ನ ಪ್ರಶಾಂತ್ ತಿಳಿಸಿದ್ದಾರೆ.
Advertisement
ಇನ್ನು ನೆಕ್ಸ್ಟ್ ಜನರೇಶನ್ ಕಾರು ಎಂದೇ ಬಿಂಬಿಸಲ್ಪಡುವ ಹುಂಡೈ ಸ್ಯಾಂಡ್ರೋ ಹೊಸ ಮಾದರಿಯ ಕಾರು ಈಗಾಗಲೇ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಗೊಂಡಿದೆ. ಅತೀ ಕಡಿಮೆ ಅಂದರೆ 4.83 ಲಕ್ಷ ರೂ. ಆರಂಭಿಕ ಬೆಲೆ ಹೊಂದಿರುವ ಈ ಕಾರಿಗೆ ಮಂಗಳೂರಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಕಾರು ವಿವಿಧ ಸೌಲಭ್ಯಗಳಿಗಾಗಿ ಮನ್ನಣೆ ಗಳಿಸಿದೆ. ಅಲ್ಲದೆ ಹೊಸತಾಗಿ ಪರಿಚಯವಾಗುತ್ತಿರುವ ರೆನಾಲ್ಟ್ ಕ್ವಿಡ್ ಕಾರು ಕೂಡ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿವೆ. ಇಷ್ಟೇ ಅಲ್ಲದೆ, ವಿವಿಧ ಕಾರು ಕಂಪೆನಿಗಳು ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗಿವೆ.
ಸಣ್ಣ ಕಾರುಗಳಿಗೆ ಮನ್ನಣೆಮಂಗಳೂರಿನಂತಹ ಬೆಳೆಯುತ್ತಿರುವ ನಗರದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಯೇ ಅತಿಯಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಆಲ್ಟೋ ಕಾರು ಗಾತ್ರದಲ್ಲಿ ಕಿರಿದಾಗಿರುವುದರಿಂದ ಇತರ ಕಾರುಗಳಿಗೆ ಹೋಲಿಸಿದರೆ ಹೆಚ್ಚು ಆರಾಮದಾಯಕ ಪ್ರಯಾಣ ಅನುಭವಿಸಲು ಸಾಧ್ಯವಿರುತ್ತದೆ. ಮಧ್ಯಮ ವರ್ಗದ ಮಂದಿಗೆ ಹೇಳಿ ಮಾಡಿಸಿದ ಕಾರು ಇದಾಗಿರುವುದರಿಂದ ಮತ್ತು ನಿರ್ವಹಣಾ ವೆಚ್ಚ ಅತಿ ಕಡಿಮೆಯಾದ್ದರಿಂದ ಈ ಕಾರಿಗೆ ಬೇಡಿಕೆ ಇದೆ. ಆಲ್ಟೋ ಕೆ10 ಕಾರು ಆಲ್ಟೋ ವೈಕೆ ಎಂಬ ಹೆಸರಿನೊಂದಿಗೆ ರೀಲಾಂಚ್ ಆಗುತ್ತಿದೆ. ಇವೆಲ್ಲ ಸಾಮಾನ್ಯ ವರ್ಗದ ಕಾರುಗಳಾದ್ದರಿಂದ ಮಂಗಳೂರು ನಗರದಲ್ಲಿ ದಿನನಿತ್ಯದ ಬಳಕೆಗೆ ಈ ಕಾರು ಬಳಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಯೋಚಿಸಿ ಯೋಜಿಸಿ
ಕಾರು ಖರೀದಿಸುವ ಮುನ್ನ ನೀವಿರುವ ಪ್ರದೇಶದ ಒಟ್ಟು ಆಗು ಹೋಗುಗಳ ಬಗ್ಗೆ ಯೋಚಿಸಿ ಅನಂತರ ಖರೀದಿಗೆ ಮುಂದಾಗಿ. ಪ್ರಯಾಣದ ಜತೆಗೆ ವಾಹನನಿಬಿಡ ರಸ್ತೆಗಳಲ್ಲಿ ಸಂಚಾರ, ಖರೀದಿಯ ನಂತರದ ನಿರ್ವಹಣಾ ಖರ್ಚು ವೆಚ್ಚಗಳು, ಪಾರ್ಕಿಂಗ್ ಸ್ಥಳಾವಕಾಶವನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಸಿದರೆ ಉತ್ತಮ. ಗ್ರಾಮೀಣ ಭಾಗಗಳಲ್ಲಿ ಕಾರೆಂದರೆ ಎತ್ತರ, ಅಗಲ ಸೇರಿ ಗಾತ್ರದಲ್ಲಿ ಹಿರಿದಾಗಿರಬೇಕೆಂದು ಬಯಸುವವರೇ ಹೆಚ್ಚು. ಆದರೆ ಅದೇ, ನಗರ ಪ್ರದೇಶಕ್ಕೆ ಬಂದಾಗ ಕನಿಷ್ಠ ಗಾತ್ರದ, ಕುಟುಂಬದ ಸುಖ ಪ್ರಯಾಣಕ್ಕೆ ಹೊಸ ಅನುಭೂತಿ ನೀಡುವಂತಿರಬೇಕೆಂಬುದೇ ಹಲವರ ಆಶಯ. ಅದಕ್ಕಾಗಿಯೇ ನಗರವಾಸಿಗಳು ಸಣ್ಣ ಕಾರುಗಳ ಮೊರೆ ಹೋಗುವುದೇ ಹೆಚ್ಚು. ಬೇಡಿಕೆಯಲ್ಲಿರುವ ಕಾರುಗಳು
ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವ ರಿಟ್ಜ್, ಇಯಾನ್, ಸ್ಯಾಂಟ್ರೋ ಕಾರುಗಳೂ ನಗರದಲ್ಲಿ ಬೇಡಿಕೆ ಪಡೆಯುತ್ತಿವೆ. ಪ್ರಮುಖವಾಗಿ ಡಿವೈಡರ್ ಕ್ರಾಸ್ ಮಾಡಲು, ಸುಲಭ ಪಾರ್ಕಿಂಗ್‌ಗಾಗಿ ಸ್ಯಾಂಟ್ರೋ ಕಾರು ಬಳಕೆಯಾಗುತ್ತದೆ. ಧನ್ಯಾ ಬಾಳೆಕಜೆ