Advertisement

ಯುವತಿಯ ರುಂಡಮುಂಡ ಕತ್ತರಿಸಿ ಕೊಲೆ ಪ್ರಕರಣ : ಐದು ತಿಂಗಳ ಬಳಿಕ ಆರೋಪಿಗಳ ಸೆರೆ

09:45 PM Mar 08, 2021 | Team Udayavani |

ಕೆ.ಆರ್.ಪೇಟೆ: ಮಹಿಳೆಯನ್ನ 14 ಭಾಗಗಳಾಗಿ ತುಂಡರಿಸಿ ಬೀಭತ್ಸವಾಗಿ ಕೊಲೆ ಮಾಡಿ ಪ್ರಕರಣವನ್ನು ಭೇದಿಸುವಲ್ಲಿ ಕೆ.ಆರ್.ಪೇಟೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿ ಕಂಬಿಯೊಳಗೆ ಅಟ್ಟಿದ್ದಾರೆ.

Advertisement

ರಂಗಪ್ಪ ಮತ್ತು ಚಂದ್ರ ಕ್ರೂರವಾಗಿ ಕೊಲೆ ಮಾಡಿರುವ ಆರೋಪಿಗಳು. ಮೃತ ದೇಹ ಸಾಗಿಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ:

ಪಾಂಡವಪುರ ತಾಲೂಕಿನ ದೇಶವಳ್ಳಿ ಗ್ರಾಮದ ಗೌರಿಶಂಕರ್ ಅವರ ಪುತ್ರಿ ಆಶಾ(25) ಎಂಬ ಯುವತಿಯನ್ನು ಅದೇ ಗ್ರಾಮದ ಇಟಾಚಿ ಅಪರೇಟರ್ ಎನ್.ರಂಗಪ್ಪ(30)ನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಮೂರು ಮಕ್ಕಳಿದ್ದು, ತನ್ನ ಪತ್ನಿಯ ಮೇಲೆ ಅನುಮಾನಗೊಂಡ ಪತಿ ರಂಗಪ್ಪ ತನ್ನ ಭಾವ ಚಂದ್ರ (37)ನ ಜತೆ ಸೇರಿಕೊಂಡು ಕೆ.ಆರ್.ಪೇಟೆ ತಾಲೂಕಿನ ಕುಂದನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ನಂತರ ಕಬ್ಬು ಕತ್ತರಿಸುವ ಮಚ್ಚಿನಿಂದ ಮೃತದೇಹ ತುಂಡರಿಸಿ ಹೇಮಾವತಿ ನದಿಗೆ ಎಸೆದು ಪರಾರಿಯಾಗಿದ್ದರು.

ಮೃತ ಆಶಾಳ ತಂದೆ ಗೌರಿಶಂಕರ್ ತಮ್ಮ ಮಗಳು ನಿಗೂಢವಾಗಿ ಕಾಣೆಯಾಗಿರುವ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ನದಿಯಲ್ಲಿ ಪತ್ತೆಯಾದ ಅಪರಿಚಿತ ಶವದ ಹೋಲಿಕೆಗಳು ಕಂಡು ಬಂದಿತ್ತು. ಅಲ್ಲದೆ, ಬಲಗೈ ಹೆಬ್ಬರಳಿನ ಮೇಲೆ ಮೀನಿನ ಹಚ್ಚೆ ಇರುವುದನ್ನು ಖಾತ್ರಿಪಡಿಸಿಕೊಂಡು ಕೊಲೆಯಾಗಿರುವ ಯುವತಿಯ ದೇಹವು ತನ್ನ ಮಗಳದ್ದು ಎಂದು ಗುರುತಿಸಿದ್ದಾರೆ.

Advertisement

ತನಿಖೆ ತೀವ್ರಗೊಳಿಸಿದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್, ಮೃತಳ ಪತಿ ರಂಗಪ್ಪ ಹಾಗೂ ಆತನ ಭಾವ ಚಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಅನುಮಾನಕ್ಕೆ ಬಲಿಯಾದ್ಲು ಆಶಾ :

ತನ್ನ ಪತ್ನಿಯ ನಡತೆ ಸರಿಯಿಲ್ಲದ ಕಾರಣ ಕೋಪಗೊಂಡು ಕೊಲೆ ಮಾಡಿದ್ದಾಗಿ ರಂಗಪ್ಪ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಬೇಧಿಸಿರುವ ಕೆ.ಆರ್.ಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್, ನಾಗಮಂಗಲ ಡಿವೈಎಸ್‌ಪಿ ನವೀನ್‌ಕುಮಾರ್, ಗ್ರಾಮಾಂತರ ಪೋಲಿಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಸುರೇಶ್, ಪಟ್ಟಣ ಠಾಣೆಯ ಸಬ್‌ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಸಿಬ್ಬಂದಿಗಳಾದ ಮುಖ್ಯ ಪೇದೆಗಳಾದ ಬಿ.ಎಸ್.ಉಮೇಶ್, ಶ್ರೀಧರ್, ಬಿ.ಎಸ್.ಚಂದ್ರಶೇಖರ್, ಪೇದೆಗಳಾದ ಎಸ್.ಅರುಣ್‌ಕುಮಾರ್, ಜಯವರ್ಧನ್, ಕೆ.ಶಿವಕುಮಾರ್, ಪಿ.ರೇವಣ್ಣ, ಮನು, ಪ್ರದೀಪ್, ಚಾಲಕರಾದ ರವಿ, ವಿರೂಪಾಕ್ಷ, ವಾಸು, ಎಎಸ್‌ಐ ಕೃಷ್ಣ, ರವಿಕಿರಣ್, ಲೋಕೇಶ್, ಸಿಬ್ಬಂದಿಗಳಾದ ಬಿ.ಜೆ.ರೇವಣ್ಣ, ಕೆ.ಪಿ.ಚೇತನ್ ಅವರನ್ನು ಪ್ರಶಂಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next