ಬೆಂಗಳೂರು: ಕಾಪ್ಟರ್ ದುರಂತದಲ್ಲಿ ತೀವ್ರ ಗಾಯಗೊಂಡು ಬುಧವಾರ ಸಾವನ್ನಪ್ಪಿದ್ದ ಗ್ರೂಪ್‌ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ಗುರುವಾರ ಭಾರತೀಯ ವಾಯುಸೇನೆ ಮತ್ತು ಕುಟುಂಬದ ಸದಸ್ಯರು ಅಂತಿಮನ ನಮನ ಸಲ್ಲಿಸಿದರು. ಯಲಹಂಕ ವಾಯುನೆಲೆಯಲ್ಲಿ ಬೆಳಿಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸೇನೆಯ ಉನ್ನತ ಅಧಿಕಾರಿಗಳು, ಕುಟುಂಬದ ಸದಸ್ಯರು ಭೇಟಿ ನೀಡಿ ಅಗ ಲಿದ ಯೋಧನಿಗೆ ನಮನ ಸಲ್ಲಿಸಿದರು. ನಂತರ ವರುಣ್ ಸಿಂಗ್ ಪಾರ್ಥಿವ ಶರೀರ ವನ್ನು ಭೂಪಾಲ್‌ಗೆ ಹೆಲಿಕಾಪ್ಟರ್ ಮೂಲಕ ಕುಟುಂಬ ಸದಸ್ಯರೊಂದಿಗೆ ಕಳುಹಿಸಿಕೊಡ ಲಾಯಿತು.
ಇದನ್ನೂ ಓದಿ;- ʼಸಖತ್ʼಖುಷಿಯಲ್ಲಿ ಗಣೇಶ್
ಅವರ ಅಂತ್ಯಕ್ರಿಯೆಯ ಎಲ್ಲ ವಿಧಿವಿಧಾನಗಳು ಅವರ ತವರೂರಿನಲ್ಲಿ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಡಿ.8ರಂದು ಕೂನೂರಿನಲ್ಲಿ ನಡೆದ ಹೆಲಿ ಕಾಪ್ಟರ್ ದುರಂತ ದಲ್ಲಿ ರಕ್ಷಣಾ ಇಲಾಖೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದಂಪತಿ ಸೇರಿದಂತೆ 13 ಜನ ಸಾವನಪ್ಪಿದ್ದರು. ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದರು.
ದುರಂತ ನಡೆದ ಮರುದಿನ ಅವ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ವೆಲ್ಲಿಂಗ್ಟನ್ ಆಸ್ಪತ್ರೆಯಿಂದ ನಗರದಕಮಾಂ ಡೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರಕೊನೆಯುಸಿರೆಳೆದಿದ್ದರು. ಅಂತಿಮ ನಮನ ಸಂದರ್ಭದಲ್ಲಿ ಮಾತ ನಾಡಿದ ವರುಣ್ ಸಿಂಗ್ ಹತ್ತಿರದ ಸಂಬಂಧಿಯೊಬ್ಬರು, “ಬಾಲ್ಯದಿಂದಲೂ ಆತ ಹಲವಾರು ಆತಂಕದ ಸನ್ನಿವೇಶಗಳನ್ನು ಎದುರಿಸಿ, ಗೆದ್ದು ಬಂದಿದ್ದರು.
ಆದರೆ, ಈ ಬಾರಿ ನಿರೀಕ್ಷೆಗಳು ಹುಸಿಯಾದವು. ಹೆಲಿ ಕಾಪ್ಟರ್ ಅಪಘಾತದಲ್ಲಿ ವರುಣ್ ದೇÖದ ಶೇ. 95ರಷ್ಟು ಭಾಗ ಸುಟ್ಟುಹೋಗಿತ್ತು. ಅವನ ಅಗಲಿಕೆಯಿಂದ ಇಡೀ ಕುಟುಂಬ ದಿಗ್ಭ್ರಾಂತವಾಗಿದೆ’ ಎಂದುಕಣ್ಣೀರಾದರು.
“ಜೀವನದುದ್ದಕ್ಕೂ ಹೋರಾಟದೊಂದಿ ಗೆ ಬಂದ ವರುಣ್, ತನ್ನ ಕೊನೆ ಗಳಿಗೆ ಯಲ್ಲೂ ಸಾವಿನೊಂದಿಗೆ ಹೋರಾಟ ನಡೆಸಿದ.ಅವನ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ. ಎಲ್ಲರಿಗೂ ವರುಣ್ ಪ್ರೇರಣೆಯಾಗಿದಾನೆ’ ಎಂದು ಹೇಳಿದರು.
ವರುಣ್ ಸಿಂಗ್ ಅವರಿಗೆ ಪೋಷಕರಾದ ನಿವೃತ್ತ ಸೇನಾಧಿಕಾರಿ ಕೆ.ಪಿ. ಸಿಂಗ್, ಉಮಾ ಸಿಂಗ್, ಸಹೋದರ ಲೆಫ್ಟಿನಂಟ್ ಕಮಾಂಡರ್ ತನುಜ್ ಸಿಂಗ್, ಪತ್ನಿ ಗೀತಾಂಜಲಿ ಸಿಂಗ್, ಪುತ್ರ ರದ್ದುಮಾನ್ ಸಿಂಗ್, ಪುತ್ರಿ ಆರಾಧ್ಯ ಸಿಂಗ್ ಇದ್ದಾರೆ.