Advertisement

ಶಿಡ್ಲಘಟ್ಟ : ರೈತರೊಬ್ಬರ ಕ್ಯಾಪ್ಸಿಕಂ ಬೆಳೆಯನ್ನು ನಾಶಪಡಿಸಿದ ದುಷ್ಕರ್ಮಿಗಳು

09:25 PM Feb 14, 2021 | Team Udayavani |

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಕ್ಯಾಪ್ಸಿಕಂ ಬೆಳೆಯನ್ನು ದುಷ್ಕರ್ಮಿಗಳು ನಾಶಪಡಿಸಿರುವ ಘಟನೆ ವರದಿಯಾಗಿದೆ.

Advertisement

ತಿಪ್ಪೇನಹಳ್ಳಿ ಗ್ರಾಮದ ಸುಕೇಶ್ ಎಂಬವರಿಗೆ ಸೇರಿದ ಕ್ಯಾಪ್ಸಿಕಂ ಬೆಳೆಯನ್ನು ನಾಶಪಡಿಸಲು ಹುನ್ನಾರ ನಡೆಸಿರುವ ದುಷ್ಕರ್ಮಿಗಳು ಬೆಳೆಯನ್ನು ಸಂರಕ್ಷಣೆ ಮಾಡಲು ನಿರ್ಮಿಸಿರುವ ಗಿರೀನ್ ಹೌಸ್ ಹಾಗೂ ಅದಕ್ಕೆ ಅಳವಡಿಸಿರುವ ಪರದೆ-ತಂತಿ ಮತ್ತು ಗಿಡಗಳನ್ನು ಕಡ್ಡಿಗಳನ್ನು ದುಷ್ಕರ್ಮಿಗಳು ಕಿತ್ತು ನಾಶಪಡಿಸಿದ್ದಾರೆ ಇದರಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ರೈತ ಸುಕೇಶ್ ಆರೋಪಿಸಿದ್ದಾರೆ.

ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಳೆಸಿರುವ ಗಿಡಗಳನ್ನು ನಾಶಪಡಿಸಿರುವ ದುಷ್ಕರ್ಮಿಗಳನ್ನು ಬಂಧಿಸಿ ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಸಾಲ ಮಾಡಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸಲಾಗಿದ್ದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಸರ್ಕಾರದಿಂದ ನಷ್ಟ ಪರಿಹಾರವನ್ನು ನೀಡಬೇಕೆಂದು ರೈತ ಸುಕೇಶ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಉಗ್ರರ ಸಂಚು ವಿಫಲ: 7 ಕೆಜಿ ಐಇಡಿ ಸ್ಪೋಟಕ ವಶ; ಇಬ್ಬರನ್ನು ಬಂಧಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next