Advertisement

ಶ್ರೀರಂಗಪಟ್ಟಣದಲ್ಲಿ ಮಕರ ಸಂಕ್ರಮಣ ಲಕ್ಷ ದೀಪೋತ್ಸವ

10:26 PM Jan 12, 2020 | Lakshmi GovindaRaj |

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದಲ್ಲಿ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿಯ ಅಂಗವಾಗಿ ಜ.15ರಂದು 30ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಶ್ರೀರಂಗನಿಗೆ ಅಂದೇ ಲಕ್ಷ ದೀಪದ ವಿಶೇಷ ಪೂಜೆ ನಡೆಯಲಿದ್ದು, ಭಕ್ತರಿಗೆ ಸ್ವರ್ಗದ ಬಾಗಿಲಿನ ಮೂಲಕ ಪ್ರವೇಶ ನೀಡಲಾಗುವುದು.

Advertisement

ದೇವರಿಗೆ ಬೆಣ್ಣೆ ಅಲಂಕಾರ ಕೂಡ ಮಾಡಲಾಗುತ್ತದೆ. ಲಕ್ಷ ದೀಪೋತ್ಸವದ ಅಂಗವಾಗಿ ದೇವಾಲ ಯದಿಂದ ಗಂಡಭೇರುಂಡ ವೃತ್ತದವರೆಗೆ ಸುಮಾರು 300 ಮೀಟರ್‌ನಷ್ಟು ದೂರದವರೆಗೆ ದೀಪಗಳನ್ನು ಜೋಡಿಸಲಾಗು ತ್ತದೆ. ಸಾಲಾಗಿ ಕಂಬಗಳನ್ನು ನೆಟ್ಟು, ಅದಕ್ಕೆ ಬಿದಿರಿನ ದಬ್ಬೆಗಳನ್ನು ಸಾಲಾಗಿ ಕಟ್ಟಲಾಗುತ್ತದೆ.

ನಂತರ, ಅದರ ಮೇಲೆ ಸಗಣಿ ಇಟ್ಟು, ಅದರ ಮೇಲೆ ಹಣತೆಯ ದೀಪಗಳನ್ನು ಉರಿಸಲಾಗುತ್ತದೆ. ಜ.15ರ ಮಕರ ಸಂಕ್ರಾಂತಿಯಂದು ಸೂಯಾಸ್ತಮಯ ಗೋಧೂಳಿ ಲಗ್ನದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು. ರಾತ್ರಿ ಹಚ್ಚಿದ ದೀಪಗಳು ಬೆಳಗಿನವರೆಗೂ ದೇವಾಲಯದ ಮುಂದೆ ಉರಿಯುವಂತೆ ಭಕ್ತರು ದೀಪಗಳಿಗೆ ಎಣ್ಣೆ ಹಾಕುತ್ತಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next