ಬೆಂಗಳೂರು: ಭಾರತದ ಐಟಿ ಹಬ್ ಎಂದೇ ಹೆಸರಾಗಿರುವ ಬೆಂಗಳೂರು ಸೈಬರ್ ಅಪರಾಧ ಗಳಲ್ಲಿಯೂ ದೇಶದ ನಗರಗಳಿಗಿಂತ ಮುಂಚೂಣಿಯಲ್ಲಿದೆ.
ಮುಂಬೈ, ದೆಹಲಿ, ಚೆನೈ ಮಹಾನಗರಗಳನ್ನು ಹಿಂದಿಕ್ಕಿರುವ ಸಿಲಿಕಾನ್ ಸಿಟಿ ಅತಿ ಹೆಚ್ಚು ಸೈಬರ್ ಕ್ರೈಂಗಳು ನಡೆಯುವ ನಗರ ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಎನ್‌ಸಿಆರ್‌ಬಿ ಬಿಡುಗಡೆ ಮಾಡಿರುವ 2019ನೇ ಸಾಲಿನ ಸೈಬರ್ ಅಪರಾಧಗಳ ಅಂಕಿ ಅಂಶಗಳಲ್ಲಿಈಮಾಹಿತಿ ಬಹಿರಂಗಗೊಂಡಿದೆ. ವರ್ಷದಿಂದ ವರ್ಷಕ್ಕೆ ಸೈಬರ್ ಅಪರಾಧ ಬೆಂಗಳೂರಿನಲ್ಲಿ ದ್ವಿಗುಣಗೊಳ್ಳುತ್ತಲೇ ಇವೆ. 2019ರಲ್ಲಿ 1,055 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು ಅಪರಾಧ ಪ್ರಮಾಣ 124.2ರಷ್ಟಿದೆ ಎಂದು ವಿಶ್ಲೇಷಿಸಲಾಗಿದೆ.
ಈ ವರ್ಷ ಇದರ ಪ್ರಮಾಣ ಇನ್ನೂ ಅಧಿಕವಾಗಿರಲಿದೆ ಎನ್ನುತ್ತವೆ ಪೊಲೀಸ್ ಮೂಲಗಳು. ಬಹುತೇಕವಂಚನೆ ಸಲುವಾಗಿಯೇನಗರದಲ್ಲಿ ಸೈಬರ್ ಕ್ರೈಂಗಳು ನಡೆದಿದ್ದು, 10,352 ಪ್ರಕರಣಗಳು ಈ ವರ್ಗಕ್ಕೆ ಸೇರಿವೆ. ಉಳಿದಂತೆ ಯುವತಿಯರಿಗೆ ಲೈಂಗಿಕ ಕಿರುಕುಳ, ಬ್ಲಾಕ್ ಮೇಲ್ ಉದ್ದೇಶ, ಡೇಟಾ ಕಳವು, ರಾಜಕೀಯ ದ್ವೇಷಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಸೇರಿ ಹಲವು ವರ್ಗದ ಪ್ರಕರಣಗಳಾಗಿವೆ. ನಗರಕ್ಕೆ ಸಂಬಂಧಿಸಿದಂತೆ 17,619 ಪ್ರಕರಣ ಗಳು ಇನ್ನೂ ತನಿಖಾ ಹಂತದಲ್ಲಿಯೇ ಉಳಿದುಕೊಂಡಿವೆ. ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ಪ್ರಮಾಣ ಶೇ 5.3ರಷ್ಟಿದ್ದು ಬಾಕಿ ಪ್ರಮಾಣ 93.3ರಷ್ಟಿದೆ. 335 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ವಿವರಿಸಲಾಗಿದೆ.
ಡ್ರಗ್ಸ್ ದಂಧೆಯಲ್ಲಿ ನಾಲ್ಕನೇ ಸ್ಥಾನ : ದೇಶದಲ್ಲೇ ಸೈಬರ್‌ಕ್ರೈಂ ನಡೆಯುವ ಪ್ರಮುಖ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿರುವಂತೆ ಡ್ರಗ್ಸ್ ದಂಧೆ ನಡೆಯುವ ಮಹಾನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ನಾಲ್ಕನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧಗಳ ದತ್ತಾಂಶಕ್ರೂಡಿಕರಣ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಮೊದಲ ಸ್ಥಾನದಲ್ಲಿ ಮಹರಾಷ್ಟ್ರದ ಮುಂಬೈ(12418 ಪ್ರಕರಣಗಳು),ಕೇರಳದಕೊಚ್ಚಿ2ನೇ ಸ್ಥಾನ(2205) ಮಧ್ಯಪ್ರದೇಶದ ಇಂದೋರ್3ನೇ ಸ್ಥಾನ (1152),ಕರ್ನಾಟಕದ ಬೆಂಗಳೂರು4ನೇ(768) ಸ್ಥಾನ ಪಡೆದುಕೊಂಡಿವೆ. 768 ಪ್ರಕರಣಗಳು ದಾಖಲಾಗಿದ್ದು, ಶೇ.9.0ರಷ್ಟಿದೆ.467 ಮಾದಕ ವಸ್ತು ಸೇವನೆ ಪ್ರಕರಣ , 301 ಅಕ್ರಮ ಮಾರಾಟ ಪ್ರಕರಣಗಳು ದಾಖಲಾಗಿವೆ.