Advertisement

ಫ್ಲೈಓವರ್‌ನಿಂದ ಕ್ಯಾಂಟರ್‌ ಬಿದ್ದು ನೂರಾರು ಕೋಳಿ ಸಾವು

11:25 AM Nov 18, 2017 | |

ಬೆಂಗಳೂರು: ಕೋಳಿಗಳನ್ನು ಕೊಂಡೊಯ್ಯುತ್ತಿದ್ದ ಕ್ಯಾಂಟರ್‌ ವಾಹನ ಫ್ಲೈಓವರ್‌ ಮೇಲಿಂದ ಕೆಳಗೆ ಬಿದ್ದು ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದು,ನೂರಾರು ಕೋಳಿಗಳು ಸಾವಿಗೀಡಾಗಿರುವ ಘಟನೆ ಯಶವಂತಪುರ ಫ್ಲೈಓವರ್‌ನಲ್ಲಿ ಶುಕ್ರವಾರ ನಡೆದಿದೆ.

Advertisement

ಚಾಲಕ ಶಬೀರ್‌, ಇಬ್ರಾಹಿಂ ಹಾಗೂ ಅಲ್ತಾಫ್‌ ಘಟನೆಯಲ್ಲಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್‌ನಿಂದ ಗುರುವಾರ ರಾತ್ರಿ ಕ್ಯಾಂಟರ್‌ನಲ್ಲಿ ನೂರಾರು ಕೋಳಿಗಳನ್ನು ತುಂಬಿಸಿಕೊಂಡು ಬರುತ್ತಿದ್ದರು.

ಶುಕ್ರವಾರ ಮುಂಜಾನೆ ಯಶವಂತಪುರ ಮೇಲು ಸೇತುವೆ ಬಳಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕ್ಯಾಂಟರ್‌ ಕೆಳಗೆ ಬಿದ್ದಿದೆ. ಪರಿಣಾಮ   ಮೂವರಿಗೆ ಗಾಯ, ನೂರಾರು ಕೋಳಿಗಳು ಸಾವನ್ನಪ್ಪಿವೆ. ಮುಂಜಾನೆ ವೇಳೆ ಘಟನೆ ಸಂಭವಿಸಿದ್ದರಿಂದ ಅದೃಷ್ಟವಶಾತ್‌ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಒಂದೆಡೆ ಕೋಳಿಗಳು ಸಾವನ್ನಪ್ಪಿರುವ ಬಗ್ಗೆ ಮಾಲೀಕರು, ಕ್ಯಾಂಟರ್‌ ಚಾಲಕ ಆತಂಕಕ್ಕೊಳಗಾದರೆ, ಮತ್ತೂಂದೆಡೆ ಘಟನೆಯ ಲಾಭ ಪಡೆದುಕೊಂಡ ಸಾರ್ವಜನಿಕರು ಸತ್ತಿದ್ದ ಕೋಳಿಗಳನ್ನು ನಾ ಮುಂದು ತಾ ಮುಂದು ಎಂಬಂತೆ ಬ್ಯಾಗಿನಲ್ಲಿ ಹಾಕಿಕೊಂಡು ಮನೆಗೆ ಕೊಂಡೊಯ್ದಿದ್ದಾರೆ. ಘಟನೆ ಸಂಬಂಧ ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next