Advertisement

Political Alliances ಮೈತ್ರಿ ಒಕ್ಕೂಟ ನಿಯಂತ್ರಿಸುವ ಹಕ್ಕಿಲ್ಲ: ಭಾರತೀಯ ಚುನಾವಣೆ ಆಯೋಗ 

09:14 PM Oct 30, 2023 | Team Udayavani |

ನವದೆಹಲಿ: 26 ವಿಪಕ್ಷಗಳ ಒಕ್ಕೂಟವನ್ನು “ಇಂಡಿಯಾ’ ಎಂದು ಹೆಸರಿಸಿರುವುದಕ್ಕೆ ನಿರ್ಬಂಧ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಮೈತ್ರಿಪಕ್ಷಗಳನ್ನು ನಿಯಂತ್ರಿಸುವ ಹಕ್ಕನ್ನು ತಾವು ಹೊಂದಿಲ್ಲವೆಂದು ಭಾರತೀಯ ಚುನಾವಣೆ ಆಯೋಗ (ಇಸಿಐ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಉದ್ಯಮಿ ಗಿರೀಶ್‌ ಭಾರದ್ವಾಜ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ “ಇಂಡಿಯಾ’ ಎಂಬ ಹೆಸರನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುವುದು ಲಾಂಛನ ಹಾಗೂ ಹೆಸರುಗಳ (ಅನುಚಿತ ಬಳಕೆ ತಡೆ ) ಕಾಯ್ದೆ 1950ರ ಉಲ್ಲಂಘನೆ ಎಂದು ವಾದಿಸಿದ್ದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಚುನಾವಣೆ ಆಯೋಗದ ಪ್ರತಿಕ್ರಿಯೆ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 29ಎ ಯಾವುದೇ ಸಂಘಗಳು, ಸಂಸ್ಥೆಗಳನ್ನು ರಾಜಕೀಯ ಪಕ್ಷಗಳನ್ನಾಗಿ ನೋಂದಾಯಿಸಿಕೊಳ್ಳುವ ಅಧಿಕಾರ ನೀಡಿದೆ. ಆದರೆ ರಾಜಕೀಯ ಮೈತ್ರಿಕೂಟಗಳನ್ನು ಕಾಯ್ದೆಗಳ ಅನ್ವಯ ನಿಯಂತ್ರಿತ ಘಟಕವನ್ನಾಗಿ ಪರಿಗಣಿಸುವ ಹಕ್ಕು ಆಯೋಗಕ್ಕೆ ಇರುವುದಿಲ್ಲವೆಂದು ಸ್ಪಷ್ಟನೆ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next