Advertisement

ಮೋದಿ ಬ್ರಿಕ್ಸ್‌ ಸಮ್ಮೇಳನದ ಭಾಷಣದ ಮಾಹಿತಿ ನೀಡಲ್ಲ

06:50 AM Sep 02, 2017 | Team Udayavani |

ಹೊಸದಿಲ್ಲಿ: ಚೀನದಲ್ಲಿ ನಡೆವ ಬ್ರಿಕ್ಸ್‌ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಏನು ಮಾತನಾಡಲಿದ್ದಾರೆ ಎಂಬುದನ್ನು ಮಾಧ್ಯಮಗಳೆದುರು ಬಹಿರಂಗಪಡಿಸಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. 

Advertisement

ಪಾಕಿಸ್ಥಾನದ ಭಯೋತ್ಪಾದನ ನಿಗ್ರಹ ನೀತಿ ಕುರಿತು ಭಾರತ ಮಾತನಾಡಲು ಬ್ರಿಕ್ಸ್‌ ಸೂಕ್ತ ವೇದಿಕೆಯಲ್ಲ ಎಂದು ಚೀನ ಹೇಳಿತ್ತು. ಹೀಗಾಗಿ ಮೋದಿ ಶೃಂಗದಲ್ಲಿ ಏನು ಮಾತನಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮೋದಿ ಮತ್ತು ಚೀನ ಅಧ್ಯಕ್ಷ  ಜಿನ್‌ಪಿಂಗ್‌ ಮಾತುಕತೆ ನಡೆಸಲಿದ್ದಾರಾ ಎಂಬ ಪ್ರಶ್ನೆಗೂ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಉತ್ತರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next