Advertisement

ಕೊರಟಗೆರೆ: ಹೊಟ್ಟೆ ನೋವು ತಾಳಲಾರದೆ ಮಹಿಳೆ ಆತ್ಮಹತ್ಯೆ

04:59 PM Dec 13, 2021 | Team Udayavani |

ಕೊರಟಗೆರೆ: ಹೊಟ್ಟೆ ನೋವಿನ ಬಾಧೆ ತಾಳಲಾರದೆ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ತಾಲೂಕಿನ ಹೊಳವನಹಳ್ಳಿ ಯ ಆಂಜಿನಪ್ಪನ ಮಡದಿ ಮಮತಾ (35 ವರ್ಷ) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ.

ಈಕೆ ಒಂದೂವರೆ ವರ್ಷದ ಹಿಂದೆ ಅಪೆಂಡಿಕ್ಸ್ ಖಾಯಿಲೆಗೆ ಅಪರೇಷನ್ ಮಾಡಿಸಿದಾಗಿನಿಂದಲೂ ಆಗಾಗ್ಗೆ ಬರುತ್ತಿದ್ದ ತೀವ್ರ ಹೊಟ್ಟೆ ನೋವು  ಬಾದೆಯನ್ನು ತಾಳಲಾರದೇ ಅಥವಾ ಬೇರೆ ಇನ್ನಾವುದೋ ಕಾರಣದಿಂದಲೂ ತನ್ಮೂಲಕ ತಾನೆ ಮನೆಯ ಹಾಲ್ ನಲ್ಲಿರುವ ಪ್ಯಾನ್ ಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ಕಟ್ಟಿಕೊಂಡು  ನೇಣು ಹಾಕಿ ಕೊಂಡು ಮೃತ ಪಟ್ಟಿದ್ದಾಳೆ. ಈಕೆಯನ್ನು ವಿವಿಧ ಆಸ್ಪತ್ರೆಗಳಿಗೆ ತೋರಿಸಲಾಗಿತ್ತು. ಅಪೆಂಡಿಕ್ಸ್ ಆದ ಕಾರಣ ತೀವ್ರ ಹೊಟ್ಟೆನೋವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ‌  ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next