Advertisement

ಸಂಸ್ಕಾರವಂತ ಯಾವ ಹೆಣ್ಣೂ ಶಬರಿಮಲೆಗೆ ಬರಲಿಚ್ಛಿಸುವುದಿಲ್ಲ!

11:18 AM Oct 14, 2017 | Team Udayavani |

ಕೊಟ್ಟಾಯಂ: ‘ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿದ ಯಾವ ಹೆಣ್ಣೂ ಶಬರಿ ಮಲೆಗೆ ಬರಲು ಇಚ್ಛಿಸುವುದಿಲ್ಲ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ , ಶಬರಿಮಲೆಯ ಪ್ರಧಾನ ಅರ್ಚಕ ಗೋಪಾಲ ಕೃಷ್ಣನ್‌ ವಿವಾದಕ್ಕೆ ಕಾರಣವಾಗಿದ್ದಾರೆ.

Advertisement

 ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡುವ ಬಗ್ಗೆ  ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಬೆನಲ್ಲೇ ಗೋಪಾಲ ಕೃಷ್ಣನ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,’ಇದರಲ್ಲಿ ವೈಯಕ್ತಿಕವೇನು ಇಲ್ಲ, ನಮಗೆ ಸಂಪ್ರದಾಯ ಮತ್ತು ಆಚರಣೆಗಳೆರಡೂ ಮುಖ್ಯವಾಗಿದ್ದು, 10 ರಿಂದ 50 ವರ್ಷದ ಒಳಗಿನ ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದು ಕೋರ್ಟ್‌ ತೀರ್ಪು ನೀಡಿದರೂ ಸುಸಂಸ್ಕೃತ ಕುಟುಂಬದ ಯಾವ ಹೆಣ್ಣೂ ಬರುವುದಿಲ್ಲ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ.

ಇದೇ ವೇಳೆ ‘ಶಬರಿಮಲೆಯನ್ನು ಥೈಲ್ಯಾಂಡ್ ಮಾಡಲು ನೋಡಬೇಡಿ’ ಎಂದು ಟೀಕಾಕಾರರ ವಿರುದ್ಧ ಗೋಪಾಲಕೃಷ್ಣನ್‌ ಹರಿಹಾಯ್ದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next