Advertisement

ಕೇಂದ್ರದಲ್ಲಿ ಅಭ್ಯರ್ಥಿಗಳ ಮತಯಾಚನೆ

12:27 AM Apr 16, 2019 | Team Udayavani |

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರು ಕ್ಷೇತ್ರದ ವಿವಿಧೆಡೆ ರೋಡ್‌ ಶೋ, ಪ್ರಚಾರ ರ್ಯಾಲಿಗಳ ನಡೆಸಿದರು.

Advertisement

ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಬೆಳಗ್ಗೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರ ಜತೆಗೆ ಪ್ರಚಾರ ಕೈಗೊಂಡರು. ಇವರಿಗೆ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ಗಳು ಸಾಥ್‌ ನೀಡಿದರು. ಸಂಜೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿಯೊಂದಿಗೆ ಕಾಚರಕನಹಳ್ಳಿ ಸುತ್ತಮುತ್ತ ಮತಯಾಚಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿನಾಯಕ ನಗರ, ಶಾಂತಿನಗರ ವಾರ್ಡ್‌ನಲ್ಲಿ ಪ್ರಚಾರ ರ್ಯಾಲಿ ಕೈಗೊಂಡರು. ಈ ರ್ಯಾಲಿಯಲ್ಲಿ ಸ್ಥಳೀಯ ಶಾಸಕ ಹ್ಯಾರಿಸ್‌ ಹಾಗೂ ಹ್ಯಾರಿಸ್‌ ಪುತ್ರ ಮಹಮದ್‌ ಹ್ಯಾರಿಸ್‌ ನಲಪಾಡ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.