Advertisement

ವಿಶೇಷ ಸ್ಥಾನಮಾನ ರದ್ದು : ಕಾಶ್ಮೀರದಲ್ಲಿ ವರ್ಷಾಚರಣೆ

08:01 AM Aug 06, 2020 | mahesh |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಮೊದಲ ವಾರ್ಷಿಕ ಸಂಭ್ರಮಾಚರಣೆಗೆ ಬಿಜೆಪಿ ಬುಧವಾರ ವಿಧ್ಯುಕ್ತ ಚಾಲನೆ ನೀಡಿದೆ. ಕೇಂದ್ರಾಡಳಿತ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 15 ದಿನ ಗಳವರೆಗೆ ಈ ಸಂಭ್ರಮಾಚರಣೆ ನಡೆಸಲಾಗುತ್ತಿದ್ದು, ಶ್ರೀನಗರದಲ್ಲಿ ಅದರ ಉದ್ಘಾಟನ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ನಾಯಕ ಅಲ್ತಾಫ್ ಠಾಕೂರ್‌, ಜಮ್ಮು ಕಾಶ್ಮೀರದ ವಿಶೇಷ ಸ್ಥಾನ­ಮಾನ ರದ್ದಾದ ಬಳಿಕ ಇಲ್ಲಿಯವರೆಗೆ ಕಣಿವೆ­ಯಲ್ಲಿ ಹಲವಾರು ಬದಲಾವಣೆಗಳಾಗಿವೆ ಎಂದರು.

Advertisement

ಅಭಿವೃದ್ಧಿಯತ್ತ ದಾಪುಗಾಲು: ಜೈಶಂಕರ್‌
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಅನಂತರ ಆ ಪ್ರದೇಶ ಅಭಿವೃದ್ಧಿ­ಯತ್ತ ಹೆಜ್ಜೆ ಹಾಕುತ್ತಿದೆ ಎಂದು ವಿದೇ­ಶಾಂಗ ಸಚಿವ ಜೈಶಂಕರ್‌ ತಿಳಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಅವರು, ಜಮ್ಮು ಕಾಶ್ಮೀರದಲ್ಲೀಗ ಎಲ್ಲೆಡೆ ಅಭಿವೃದ್ಧಿ ಯೋಜನೆಗಳು ಕಾರ್ಯ­ಗತಗೊಳ್ಳುತ್ತಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next