Advertisement
ಪರಿಣಾಮಕಾರಿ ತ್ಯಾಜ್ಯ ವಿಲೇವಾರಿ ನಿರ್ವಹಣೆಯಲ್ಲಿ ತೊಡಗಿಸಿಕೊಂಡ ಸಂಘ-ಸಂಸ್ಥೆಗಳ ಮುಖ್ಯಸ್ಥರ ಜತೆ ವಿಧಾನಸೌಧದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಆವರು, “ಪ್ರಸ್ತುತ ಗುತ್ತಿಗೆ ಆಧಾರದಲ್ಲಿರುವ ಪೌರ ಕಾರ್ಮಿಕರು ಸೇರಿದಂತೆ ಇನ್ಮುಂದೆ ಭರ್ತಿ ನೇಮಿಸುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಿ, ಎಲ್ಲ ಕಸ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಲಾಗುವುದು,’ ಎಂದರು.
Related Articles
Advertisement
100 ಕಿ.ಮೀ. ದೂರ ಹೋದರೂ ಇದೇ ಸಮಸ್ಯೆ. ಹೀಗಾದರೆ ನಾವಾದರೂ ಎಲ್ಲಿಗೆ ಕಸ ಸಾಗಿಸಬೇಕು. ಜನರು ಜಾಗೃತರಾಗಿ ಹಸಿ ಮತ್ತು ಒಣ ಕಸ ವಿಂಗಡಿಸಿದರೆ ಅರ್ಧದಷ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಇದಕ್ಕೆ ಪಾಲಿಕೆ, ಸರ್ಕಾರದ ಜತೆ ಸೇವಾ ಸಂಸ್ಥೆಗಳು ,ನಾಗರಿಕ ಕ್ಷೇಮಾಭಿವೃದ್ಧಿ ಸಂಘಟನೆಗಳು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮೇಯರ್ ಪದ್ಮಾವತಿ, ಪಾಲಿಕೆ ಆಯುಕ್ತ ಮಂಜುನಾಥಪ್ರಸಾದ್, ಜಂಟಿ ಆಯುಕ್ತ ಸಫ್ರಾಜ್‌ಖಾನ್ (ಘನತ್ಯಾಜ್ಯ ವಿಲೇವಾರಿ) ಉಪಸ್ಥಿತರಿದ್ದರು. ಪ್ರತಿನಿಧಿಗಳ ಪರವಾಗಿ ರಮಾಕಾಂತ್, ಸಂದ್ಯಾ ನಾರಾಯಣನ್, ಕಾತ್ಯಾಯಿನಿ ಚಾಮರಾಜ್, ಡಾ.ಶಾಂತಿ, ಅಲೆನ್ ಜೋಸೆಫ್, ನಳಿನಿ ಶೇಖರ್, ಲಕ್ಷ್ಮಿಕಾಂತ್, ಮೀರಾ ಅರುಣ್ ಮತ್ತಿರರು ಮಾತನಾಡಿದರು.
ಯಾರ ಮುಲಾಜೂ ಇಲ್ಲ: “ನಾನು ಯಾವುದೇ ಗುತ್ತಿಗೆದಾರ ಅಥವಾ ಅಧಿಕಾರಿಯಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಹಣ ಪಡೆಯುವುದು ಅಥವಾ ಬೇರೆ ರೀತಿಯ ಕೆಲಸ ಮಾಡುವಂತೆ ಒತ್ತಡ ಹಾಕುವುದ ಮಾಡಿಲ್ಲ. ಮಾಡುವುದೂ ಇಲ್ಲ. ಹೀಗಾಗಿ ಧೈರ್ಯದಿಂದ ಜನರ ಕೆಲಸ ಮಾಡಲು ತಾಕೀತು ಮಾಡುತ್ತೇನೆ. ನನಗೆ ಯಾರ ಮುಲಾಜೂ ಇಲ್ಲ.
ಸೇವಾ ಸಂಸ್ಥೆಗಳು ಆರೋಪ ಅಥವಾ ಸಲಹೆಗೆ ಸೀಮಿತವಾಗದೆ ಸಮಸ್ಯೆ ನಿವಾರಣೆ ಮಾರ್ಗೋಪಾಯಗಳ ಬಗ್ಗೆ ಉಪಯುಕ್ತ ಸಲಹೆ ನೀಡಬೇಕು. ನಾನಂತೂ ಮುಕ್ತವಾಗಿದ್ದೇನೆ. ಯಾವುದೇ ಸಮಯದಲ್ಲೂ ನೀವು ನನ್ನನ್ನು ನೇರವಾಗಿ ಭೇಟಿಯಾಗಬಹುದು ಎಂದು ಸಂವಾದದಲ್ಲಿ ಪಾಲ್ಗೊಂಡ ನಾಗರಿಕ ಕ್ಷೇಮಾಭಿವೃದ್ಧಿ ಸಂಘಟನೆಗಳ ಪ್ರತಿನಿಧಿಗಳಿಗೆ ಜಾರ್ಜ್ ಭರವಸೆ ನೀಡಿದರು.
ಪಾಲಿಕೆಯಿಂದಲೇ ಕವರ್ ಖರೀದಿ: ಹಾಲಿನ ಕವರ್ ಸೇರಿದಂತೆ ಪುನರ್‌ಬಳಕೆಯಾಗುವ ಪ್ಲಾಸ್ಟಿಕ್ ಸಂಗ್ರಹಿಸಿಟ್ಟು ಮಾರಾಟ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ, ಬಿಬಿಎಂಪಿ ವತಿಯಿಂದಲೇ ಪ್ಲಾಸ್ಟಿಕ್ ಖರೀದಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಡೆಯಲು ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಕಸ ಸುರಿದವರಿಗೆ ಭಾರಿ ದಂಡ ವಿಧಿಸಲಾಗುವುದು. ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಸಂಗ್ರಹ ಕಡ್ಡಾಯಗೊಳಿಸಿದ್ದರೂ ಜಾರಿಯಾಗುತ್ತಿಲ್ಲ. ಇದರ ಬಗ್ಗೆಯೂ ಹೆಚ್ಚು ಗಮನಹರಿಸಲಾಗುವುದು ಎಂದು ಸಚಿವ ಜಾರ್ಜ್ ತಿಳಿಸಿದರು.
ಹಸಿ ಹಾಗೂ ಒಣ ಕಸ ಬೇರ್ಪಡಿಸಿ ನೀಡದ ಹಾಗೂ ರಸ್ತೆ ಬದಿ ಕಸ ಸುರಿಯುವವರಿಗೆ ಸಂಚಾರ ಪೊಲೀಸರ ಮಾದರಿಯಲ್ಲಿ ದಂಡ ವಿಧಿಸಲಾಗುವುದು. ಪ್ಲಾಸ್ಟಿಕ್ ನಿಷೇಧ ಹಾಗೂ ಕಟ್ಟಡದ ಅವಶೇಷ ಸೇರಿ ಅನುಪಯುಕ್ತ ವಸ್ತುಗಳನ್ನು ರಾಜಕಾಲುವೆ ಹಾಗೂ ರಸ್ತೆ ಬದಿ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ಪ್ರಹರಿ ಮತ್ತು ಗಸ್ತು ಪಡೆ ರಚಿಸಲಾಗುವುದು.-ಕೆ.ಜೆ.ಜಾರ್ಜ್, ನಗರ ಅಭಿವೃದ್ಧಿ ಸಚಿವ