ನವ ದೆಹಲಿ : ದೇಶದಲ್ಲಿನ ಕೋವಿಡ್ 19 ಸಾಂಕ್ರಾಮಿಕ ಸೋಂಕಿನ ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು(ಮಂಗಳವಾರ,ಜೂನ್ 1) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ಕೋವಿಡ್ ಸೋಂಕಿನಿಂದ ಭಯ ಭೀತರಾಗಿದ್ದಾರೆ. ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಭಯಭೀತರಾಗಿದ್ದಾರೆ. ಲಸಿಕೆಗಳ ಕೊರತೆ ಇದೆ. ಕೋವಿಡ್ ಸೋಂಕಿನ ಎರಡನೇ ಅಲೆಯು ಪೋಷಕರಲ್ಲಿ ತುಂಬಾ ಭೀತಿ ಸೃಷ್ಟಿ ಮಾಡಿದೆ. ಲಸಿಕೆ ನೀಡದೇ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವಂತೆ ಮಾಡುವುದು ಅವರನ್ನು ಬೆಂಕಿಯೊಂದಿಗೆ ಆಟವಾಡಲು ಬಿಟ್ಟಂತೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕೋವಿಡ್ 19 : ಹೈದರಾಬಾದ್ ಗೆ ರಷ್ಯಾದಿಂದ ಬಂದಿಳಿಯಿತು 56.6 ಟನ್ ಸ್ಪುಟ್ನಿಕ್ ವಿ ಲಸಿಕೆ..!
ಈ ಕುರಿತಾಗಿ ಟ್ವಿಟ್ ಮಾಡಿರುವ ಕೇಜ್ರಿವಾಲ್, ವ್ಯಾಕ್ಸಿನೇಷನ್ ಆಗದೇ ಪರೀಕ್ಷೆಯನ್ನು ನಡೆಸಬಾರದು ಎಂದು ಪೋಷಕರು ಬಯಸುತ್ತಾರೆ. ಮಕ್ಕಳು ಮತ್ತು ಪೋಷಕರು ದ್ವಿತೀಯ ಪಿಯುಸಿ ಪರೀಕ್ಷೆಯ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.
Related Articles
ಇನ್ನು, ಸರ್ಕಾರ ಹಾಗೂ ಪಿಯುಸಿ ಬೋರ್ಡ್ ವಿದ್ಯಾರ್ಥಿಗಳ ಪೂರ್ವ ಪರೀಕ್ಷೆ ಹಾಗೂ ಶೈಕ್ಷಣಿಕ ಆತಂರಿಕ ಪರೀಕ್ಷೆ, ಚಟುವಟಿಕೆಗಳನ್ನು ಆಧರಿಸಿ ತೇರ್ಗಡೆ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಸಿಬಿಎಸ್‌ಇ ಏಪ್ರಿಲ್ 14 ರಂದು 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡುವುದಾಗಿ ಘೋಷಿಸಿತ್ತು.
ಇದನ್ನೂ ಓದಿ : ವಿಡಿಯೋ ವೈರಲ್ : ಮದುವೆ ಸಮಾರಂಭದಲ್ಲಿಯೇ ಗುಂಡು ಹಾರಿಸಿದ ವಧು : FIR ದಾಖಲು