Advertisement

ಭಜನಾ ಕಾರ್ಯಕ್ರಮ ರದ್ದು ಮಾಡಿ…ಇಲ್ಲದಿದ್ರೆ…ಮೆಲ್ಬೋರ್ನ್ ಕಾಳಿ ಮಾತಾ ಮಂದಿರಕ್ಕೆ ಬೆದರಿಕೆ

05:20 PM Feb 16, 2023 | Team Udayavani |

ಮೆಲ್ಬೋರ್ನ್: ಒಂದು ವೇಳೆ ಭಜನಾ ಕಾರ್ಯಕ್ರಮವನ್ನು ರದ್ದುಗೊಳಿಸದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ…ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿರುವ ಕಾಳಿ ಮಾತಾ ಮಂದಿರಕ್ಕೆ ಬಂದ ಬೆದರಿಕೆಯ ಕರೆ!

Advertisement

ಇದನ್ನೂ ಓದಿ:ಚಹಾ ಮಾರಿಕೊಂಡು ಕೋಟ್ಯಾಧಿಪತಿಯಾದ ಯುವಕನಿಂದ 90 ಲಕ್ಷ ಮೌಲ್ಯದ ಕಾರು ಖರೀದಿ : ಫೋಸ್ಟ್‌ ವೈರಲ್

ಆಸ್ಟ್ರೇಲಿಯಾ ಟುಡೇ ವರದಿ ಪ್ರಕಾರ, ಮೂರು ವಾರಗಳ ಹಿಂದೆಯೇ ಮುಂಬರುವ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮೆಲ್ಬೋರ್ನ್ ನಲ್ಲಿರುವ ಕಾಳಿ ಮಾತಾ ಮಂದಿರದಲ್ಲಿ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದೆ.

ಬೆದರಿಕೆ ಕರೆಗೆ  ಪ್ರತಿಕ್ರಿಯಿಸಿರುವ ಕಾಳಿ ಮಾತಾ ಮಂದಿರದ ಅರ್ಚನಾ ಅವರು, ದೇವಾಲಯದ ಆಡಳಿತ ಮಂಡಳಿ ಒಂದು ತಿಂಗಳ ಕಾರ್ಯಕ್ರಮ ನೆರವೇರಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ ಅದಕ್ಕಾಗಿ ಭಕ್ತರ ಸಾಕಷ್ಟು ಹಣವನ್ನು ವಿನಿಯೋಗಿಸಲಾಗಿದೆ. ಆ ನಿಟ್ಟಿನಲ್ಲಿ ಭಜನಾ ಕಾರ್ಯಕ್ರಮ ರದ್ದುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಆದರೆ ಕರೆ ಮಾಡಿದಾತ, ನನ್ನ ಕೆಲಸ ಎಚ್ಚರಿಕೆ ಕೊಡುವುದು ಮಾತ್ರವಾಗಿದೆ. ಒಂದು ವೇಳೆ ನನ್ನ ಮಾತನ್ನು ಕಡೆಗಣಿಸಿದರೆ, ನಾವು ಏನು ಮಾಡಲಿದ್ದೇವೆ ಎಂಬುದು ನಿಮಗೆ ತಿಳಿಯಲಿದೆ ಎಂದು ಬೆದರಿಕೆ ಹಾಕಿರುವುದಾಗಿ ಪತ್ರಿಕೆ ವರದಿ ಮಾಡಿದೆ.

Advertisement

ಬೆದರಿಕೆ ಕರೆಗೆ ಸಂಬಂಧಿಸಿದಂತೆ ಭಾವನಾ ಅವರು ಕ್ರೈಗ್ ಬರ್ನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಬ್ಬದ ವೇಳೆ ಸೂಕ್ತ ಭದ್ರತೆ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಸಾರ್ಜೆಂಟ್ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿನ ಶಿವ ವಿಷ್ಣು ದೇವಾಲಯದ ಮೇಲೆ ಹಿಂದೂ ವಿರೋಧಿ ಗೋಡೆ ಬರಹ ಬರೆದು ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು. ಒಂದು ವಾರದ ಮೊದಲು ಆಸ್ಟ್ರೇಲಿಯಾದ ಮಿಲ್ ಪಾರ್ಕ್ ನಲ್ಲಿದ್ದ ಸ್ವಾಮಿನಾರಾಯಣ ಮಂದಿರವನ್ನು ಒಡೆದು ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next