ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಇತೀಚೆಗೆ ಆರಂಭಿಸಿರುವ “ಕೆನರಾ ರುಪೇ ಕ್ರೆಡಿಟ್ ಕಾರ್ಡ್’ ಅನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶರ್ಮ ಬಿಡುಗಡೆ ಮಾಡಿದರು.
ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸಹಯೋಗದೊಂದಿಗೆ ಕೆನರಾ ಬ್ಯಾಂಕ್ ರುಪೇ ಕ್ರೆಡಿಟ್ ಕಾರ್ಡ್ ಸೇವೆ ಆರಂಭಿಸಿದೆ.
ಗ್ರಾಹಕರು ಈ ಕ್ರೆಡಿಟ್ ಕಾರ್ಡ್ ಮೂಲಕ ಯಾವುದೇ ರೀತಿ ಬಿಲ್ ಪಾವತಿಸಿದರೆ ಹಾಗೂ ಶಾಪಿಂಗ್ ಮಾಡಿದರೆ, ಹಣ ಮರುಪಾವತಿಗೆ 20ರಿಂದ 50 ದಿನಗಳವರೆಗೆ ಕಾಲಾವಧಿ ಸಿಗಲಿದೆ. ಈ ಅವಧಿಯಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಹಣ ಮರುಪಾವತಿಸಿದರೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ. ಅಲ್ಲದೆ, ಒಂದು ಲಕ್ಷ ರೂ.ವರೆಗೆ ವಿಮೆ ಸೌಲಭ್ಯ ಕೂಡ ಇರುತ್ತದೆ. ಇದು ಲೈಫ್‌ಟೈಮ್ ಉಚಿತ ಕಾರ್ಡ್ ಆಗಿದ್ದು, ಕಾರ್ಡ್ ವಿತರಣೆಗೆ ಯಾವುದೇ ಶುಲ್ಕವಿಲ್ಲ. ಪ್ರತಿ 100 ರೂ. ಖರೀದಿಗೆ ಎರಡು ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ವಿ. ಭಾರತಿ, ಎಂ.
ವೆಂಕಟರಾವ್, ದೇಬಶೀಶ್ ಮುಖರ್ಜಿ ಉಪಸ್ಥಿತರಿದ್ದರು.