Advertisement

‘ಬಡ್ಡೀಸ್‌’ ಮೊಗದಲ್ಲಿ ಖುಷಿ

03:30 PM Jul 04, 2022 | Team Udayavani |

ಕಿರಣ್‌ ರಾಜ್‌ ಅಭಿನಯದ ಬಡ್ಡೀಸ್‌ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಇತ್ತೀಚೆಗೆ ಈ ಖುಷಿಯನ್ನು ಮಾಧ್ಯಮದ ಮುಂದೆ ಬಂದು ಚಿತ್ರತಂಡ ಹಂಚಿಕೊಂಡಿದೆ.

Advertisement

“ನನ್ನನ್ನು ಇಷ್ಟು ದಿನ ಕನ್ನಡತಿ ಕಿರಣ್‌ ರಾಜ್‌ ಎನ್ನುತ್ತಿದ್ದರು. ಈಗ ಬಡ್ಡೀಸ್‌ ಕಿರಣ್‌ ರಾಜ್‌ ಎನ್ನಲು ಆರಂಭಿಸಿದ್ದಾರೆ. ಸಿನಿಮಾ ಹೆಸರಿನಿಂದ ನನ್ನ ಹೆಸರು ಕರೆಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ. ಬೆಂಗಳೂರು, ಮೈಸೂರಿನ ಕೆಲವು ಚಿತ್ರಮಂದಿರಗಳಿಗೆ ಭೇಟಿ ಮಾಡಿದ್ದೇನೆ. ಜನರ ಸ್ಪಂದನೆ ಕಂಡು ಮನಸ್ಸು ತುಂಬಿ ಬಂದಿದೆ’ ಎಂದರು ಕಿರಣ್‌ ರಾಜ್.

ನಿರ್ಮಾಪಕಿ ಭಾರತಿ ಶೆಟ್ಟಿ ಮಾತನಾಡಿ, “ದುಬೈನಿಂದ ಬಂದು ಕನ್ನಡ ಚಿತ್ರ ನಿರ್ಮಿಸಿದ್ದೇನೆ. ನಮ್ಮ ಚಿತ್ರಕ್ಕೆ ಕನ್ನಡಿಗರು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ. ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದೇನೆ ಎಂಬ ತೃಪ್ತಿ ಇದೆ’ ಎಂದರು.

ಇದನ್ನೂ ಓದಿ:ವಿಕ್ರಾಂತ್ ರೋಣನ ಲಾಲಿ ಹಾಡಿಗೆ ಮೆಚ್ಚುಗೆ

ಚಿತ್ರ ಕರ್ನಾಟಕದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚು ಜನಕ್ಕೆ ನಮ್ಮ ಚಿತ್ರ ತಲುಪಬೇಕು. ನಿರ್ದೇಶನಕ್ಕೆ ಅವಕಾಶ ನೀಡಿದ ನಿರ್ಮಾಪಕರಿಗೆ, ಸಹಕಾರ ನೀಡಿದ ಚಿತ್ರತಂಡಕ್ಕೆ ನಿರ್ದೇಶಕ ಗುರುವೇಂದ್ರ ಶೆಟ್ಟಿ ಧನ್ಯವಾದ ತಿಳಿಸಿದರು. ತನ್ನ ಪಾತ್ರವನ್ನು ಮೆಚ್ಚಿಕೊಂಡಿರುವ ಸಿನಿರಸಿಕರು ಆ ಪಾತ್ರದ ಮೂಲಕವೇ ತಮ್ನನ್ನು ಗುರುತಿಸುತ್ತಿರುವುದಕ್ಕೆ ನಟಿ ಸಿರಿ ಪ್ರಹ್ಲಾದ್‌ ಸಂತಸಪಟ್ಟರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next