Advertisement

ಕೆನರಾ ಬ್ಯಾಂಕ್‌ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆಗೆ ಚಾಲನೆ

06:47 AM May 25, 2019 | Lakshmi GovindaRaj |

ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಭಾರತದಲ್ಲಿ ಎರಡು ಪ್ರಭಾವಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ತನ್ನ ಅಧಿಕೃತ ಅಸ್ತಿತ್ವವನ್ನು ಗುರುತಿಸಿಕೊಂಡಿದೆ.

Advertisement

ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಬುಧವಾರ ಅಧಿಕೃತ ಫೇಸ್‌ಬುಕ್‌ (@canarabankglobal) ಮತ್ತು ಇನ್‌ಸ್ಟಾಗ್ರಾಂ (@canarabankinsta) ಪೇಜ್‌ಗಳಿಗೆ ಬ್ಯಾಂಕಿನ ಅಧ್ಯಕ್ಷ ಟಿ.ಎನ್‌.ಮನೋಹರನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ, ಸಿಇಒ ಆರ್‌.ಎ.ಶಂಕರ ನಾರಾಯಣನ್‌ ಅವರು ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ನಿರ್ದೇಶಕ ಮಂಡಳಿ ಜತೆಯಲ್ಲಿ ಅನಾವರಣ ಮಾಡಿದರು.

ಈಗಾಗಲೇ ಕೆನರಾ ಬ್ಯಾಂಕ್‌ನ ಯುಟ್ಯೂಬ್‌ ಮತ್ತು ಟ್ವೀಟರ್‌ನಲ್ಲಿ ಬಹುದೊಡ್ಡ ಸಂಖ್ಯೆಯ ಫಾಲೋವರ್‌ಗಳು/ಸಬ್‌ಸ್ಕೈಬರ್‌ಗಳು ಇದ್ದಾರೆ ಎಂದು ಶಂಕರ ನಾರಾಯಣನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next