Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆನರಾ ಬ್ಯಾಂಕಿನ ನಿರ್ವಹಕ ನಿರ್ದೇಶಕ ರಾಕೇಶ್ ಶರ್ಮ, ಬ್ಯಾಂಕ್‌ನ ಬಡ್ಡಿಯೇತರ ಆದಾಯ 2396 ಕೋಟಿ ರೂ. ಇದ್ದು, ವರ್ಷದಿಂದ ವರ್ಷಕ್ಕೆ ಶೇ.73.24ರಷ್ಟು ಪ್ರಗತಿ ಸಾಧಿಸಿದೆ. ನಿವ್ವಳ ಬಡ್ಡಿ ಆದಾಯ, ಶೇ.14.08 ಅಭಿವೃದ್ಧಿಯಾಗಿದ್ದು, 2708 ಕೋಟಿ ರೂ.ತಲುಪಿದೆ. ಕಾರ್ಯಾಚರಣೆ ವೆಚ್ಚ 2123 ಕೋಟಿ ರೂ. ಆಗಿದ್ದು, ಕಾರ್ಯಕಾರಿ ವೆಚ್ಚದ ಏರಿಕೆಯನ್ನು ವರ್ಷದಿಂದ ವರ್ಷಕ್ಕೆ ಶೇ.1ಕ್ಕೆ ಸೀಮಿತಗೊಳಿಸಲಾಗಿದೆ.
ಬ್ಯಾಂಕಿನ ಈ ಬಾರಿಯ ಕಾರ್ಯಾಚರಣೆ ಲಾಭ 8914 ಕೋಟಿ ರೂ.ಗಳಷ್ಟು ವೃದ್ಧಿಯಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಶೇ.24.72ರಷ್ಟು ಪ್ರಗತಿಯಾಗುತ್ತಿದೆ. ವಿತ್ತ ವರ್ಷ 2016ರಲ್ಲಿ 2813 ಕೋಟಿ ನಿವ್ವಳ ನಷ್ಟಕ್ಕೆ ಹೋಲಿಸಿದಾಗ ಈ ಬಾರಿ ಬ್ಯಾಂಕ್ 1122 ಕೋಟಿ ನಿವ್ವಳ ಲಾಭ ಗಳಿಸಿದೆ. ಒಟ್ಟಾರೆ ಆದಾಯ 48942 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಾಲದ ಮೇಲಿನ ಬಡ್ಡಿ 29586 ಕೋಟಿ ರೂ.ಒಳಗೊಂಡಿದೆ. ಆದಾಯದಲ್ಲಿ ಒಟ್ಟಾರೆ ವೆಚ್ಚ ಶೇ.4.13ರಷ್ಟು ಇಳಿಕೆಯೊಂದಿಗೆ ರೂ.40028 ಕೋಟಿಯಾಗಿದೆ. ಬಡ್ಡಿಯೇತರ ಆದಾಯ ಶೆ.54.95ರಷ್ಟು ಬೆಳವಣಿಗೆಯೊಂದಿಗೆ 7554 ಕೋಟಿ ರೂ.ತಲುಪಿದೆ ಎಂದರು.
Related Articles
Advertisement
ಮುಂದಿನ ಗುರಿವಿತ್ತ ವರ್ಷ 2018ರಲ್ಲಿ ರೀಟೇಲ್ ವ್ಯವಹಾರ, ಆಸ್ತಿ ಗುಣಮಟ್ಟ, ಚಾಲ್ತಿ ಮತ್ತು ಉಳಿತಾಯ ಠೇವಣಿ, ರೀಟೇಲ್ ಠೇವಣಿ, ರೀಟೆಲ್ ಸಾಲಗಳು, ಬಡ್ಡಿಯೇತರ ಆದಾಯ, ನಿಷ್ಕ್ರಿಯ ಆಸ್ತಿಗಳನ್ನು ಸೀಮಿತಗೊಳಿಸುವುದು. ವಸೂಲಾತಿ, ಕಾರ್ಯಾಚರಣೆ ಹಣಕಾಸು ಅನುಪಾತಗಳಾದ ನಿವ್ವಳ ಬಡ್ಡಿ ಅಂತರ, ಆಸ್ತಿಗಳ ಮೇಲಿನ ಪ್ರತಿಫಲನ, ಸಾಮ್ಯ ಬಂಡವಾಳದ ಮೇಲಿನ ಪ್ರತಿಫಲನ ಮುಂತಾದವುಗಳನ್ನು ಉತ್ತಮ ಪಡಿಸುವ ಗುರಿ ಹೊಂದಲಾಗಿದೆ ಎಂದರು.