Advertisement

Canada: ಭಾರತ ವಿರುದ್ಧ ಕೆನಡಾ ಪ್ರಧಾನಿ ಟ್ರಾಡೊ ಮತ್ತೆ ತಕರಾರು

11:35 PM Nov 12, 2023 | Pranav MS |

ಒಟ್ಟಾವಾ: ಹೊಸದಿಲ್ಲಿಯಲ್ಲಿ ಇದ್ದ 40 ಕೆನಡಾ ರಾಜತಾಂತ್ರಿಕರಿಗೆ ನೀಡಿದ್ದ ರಕ್ಷಣೆ ರದ್ದುಪಡಿಸಿದಕ್ಕೆ ಭಾರತದ ವಿರುದ್ಧ ಮತ್ತೂಮ್ಮೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಒಟ್ಟಾವದಲ್ಲಿ ಮಾತನಾಡಿದಅವರು “ಭಾರತದಂತಹ ದೊಡ್ಡ ದೇಶಗಳೇ ಪರಿಣಾಮಗಳ ಕುರಿತು ಯೋಚಿಸದೇ ವಿಯೆನ್ನಾ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂ ಸಿದರೆ, ಜಗತ್ತು ಎಲ್ಲರಿಗೂ ಹೆಚ್ಚು ಅಪಾಯಕಾರಿ ಆಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಖಲಿಸ್ಥಾನ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರದಲ್ಲಿ ಸಾಕ್ಷ್ಯಗಳನ್ನು ಭಾರತದೊಂದಿಗೆ ನಾವು ಹಂಚಿಕೊಂಡಿದ್ದೇವೆ. ಕೆನಡಾದ ನೆಲದಲ್ಲಿ ಕೆನಡಾ ಪ್ರಜೆಗಳ ಹತ್ಯೆಯಲ್ಲಿ ಭಾರತ ಸರಕಾರ ಭಾಗಿಯಾಗಿದೆ’ ಎಂದು ಆರೋಪಿಸಿದ್ದಾರೆ.

ಜೈಶಂಕರ್‌ ತಿರುಗೇಟು: ಕೆನಡಾ ಪ್ರಧಾನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, “ನಿಜ್ಜರ್‌ ಹತ್ಯೆ ಕುರಿತು ಸೂಕ್ತ ಸಾಕ್ಷ್ಯಗಳು ಇದ್ದರೆ ಭಾರತದೊಂದಿಗೆ ಹಂಚಿಕೊಳ್ಳುವಂತೆ ಕೆನಡಾಕ್ಕೆ ನಾವು ಪದೇ ಪದೆ ತಿಳಿಸಿದ್ದೇವೆ. ತನಿಖೆಗೆ ಸಹಕರಿಸಲು ನಾವು ಸಿದ್ಧರಿದ್ದೇವೆ. ಆದರೆ ಇದುವರಿಗೂ ಕೆನಡಾ ಯಾವುದೇ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next