ನವದೆಹಲಿ: ದೆಹಲಿ: ಜಿ20 ಶೃಂಗಸಭೆಗಾಗಿ ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ತಂಡ ಸಭೆ ಮುಗಿಸಿ ಭಾನುವಾರ ಹಿಂತಿರುಗಬೇಕಿತ್ತು ಆದರೆ ದೆಹಲಿಯಿಂದ ಹಿಂತಿರುಗಲು ಸಾಧ್ಯವಾಗಲಿಲ್ಲ. ಟ್ರುಡೊ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ದೆಹಲಿಯಲ್ಲೇ ಉಳಿದುಕೊಳ್ಳಬೇಕಾಯಿತು.
ದೆಹಲಿಯಿಂದ ರಾತ್ರಿ ಸುಮಾರು ಎಂಟು ಗಂಟೆಗೆ ವಿಮಾನ ಹೋರಾಡಬೇಕಿತ್ತು ಅಷ್ಟೋತ್ತಿಗಾಗಲೇ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದ್ದ ಪರಿಣಾಮ ಸಮಸ್ಯೆಯನ್ನ ರಾತ್ರೋರಾತ್ರಿ ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಎಲ್ಲರೂ ದೆಹಲಿಯಲ್ಲೇ ಉಳಿಯುವಂತಾಗಿದೆ.
ಇದನ್ನೂ ಓದಿ:Ankola: ಅಂಗಡಿಗೆ ಬೆಂಕಿ: ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ