Advertisement
ನಿಜ್ಜರ್ ಹತ್ಯೆಯಲ್ಲಿ ಭಾರತೀಯ ರಾಜ ತಾಂತ್ರಿಕರ ಕೈವಾಡವಿದೆ ಇದಕ್ಕೆಲ್ಲ ನನ್ನ ಬಳಿ ಪುರಾವೆ ಇದೆ ಎಂದು ಹೇಳಿಕೊಳ್ಳುತ್ತಿದ್ದ ಟ್ರುಡೊ ಬುಧವಾರ ಸಾರ್ವಜನಿಕವಾಗಿ ಭಾರತದ ಕೈವಾಡ ನಿರೂಪಿಸುವ ಯಾವುದೇ ಬಲವಾದ ಸಾಕ್ಷಿ ಇಲ್ಲ, ಅವುಗಳನ್ನು ಭಾರತದ ಮುಂದೆ ನಾವು ಪ್ರಸ್ತುತವೂ ಪಡಿಸಿಲ್ಲ ಎಂದು ಒಪ್ಪಿಕೊಂಡಿದ್ದರು.
ಕೆನಡಾದಲ್ಲಿನ ಟಾರ್ಗೆಟ್ ಕಿಲ್ಲಿಂಗ್‌ಗೆ ಭಾರ ತದ ರಾಜ ತಾಂತ್ರಿಕರು ಬಿಷ್ಣೋಯ್ ಗ್ಯಾಂಗ್ ಸದಸ್ಯರನ್ನು ಬಳಸುತ್ತಿದ್ಧಾರೆ ಎಂದಿದ್ದ ಕೆನಡಾ ಪೊಲೀಸರಿಗೆ ಭಾರತ ತಕ್ಕ ತಿರುಗೇಟು ನೀಡಿದೆ. ಕೆನಡಾದಲ್ಲಿರುವ ಬಿಷ್ಣೋಯ್ ಗ್ಯಾಂಗ್‌ನ 26 ಮಂದಿಯ ಹಸ್ತಾಂತರ ಕೋರಿ ಭಾರತ 1 ದಶಕದಿಂದ ಮನವಿ ಸಲ್ಲಿಸಿದರೂ ಕೆನಡಾ ಕ್ರಮ ಕೈಗೊಂಡಿಲ್ಲ ಎಂದಿದೆ.
Related Articles
ಒಟ್ಟಾವ: ಖಲಿಸ್ಥಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಭಾರತದ ಜತೆಗಿನ ಬಾಂಧವ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕೆನಡಾ ಆಡಳಿತ ಲಿಬರಲ್ ಪಕ್ಷದ ಸಂಸದರೇ ಟ್ರುಡೊ ರಾಜೀನಾಮೆಗೆ ಆಗ್ರಹಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.
Advertisement
ಕೆನಡಾ ಪ್ರಧಾನಿ ಮಾತಿಗೆ ಭಾರತದ ನಾಯಕರ ಟೀಕೆನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಬಗ್ಗೆ ಸಾಕ್ಷ್ಯಗಳಿಲ್ಲ ಎಂಬ ಟ್ರುಡೊ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಟೀಕಿಸಿದ್ದಾರೆ. “ಸಾಕ್ಷ್ಯವಿಲ್ಲದೇ ಕೇವಲ ಗುಪ್ತ ಚರ ಮಾಹಿತಿ ಆಧಾರದಲ್ಲಿ ವಿಶ್ವಮಟ್ಟದ ನಾಯಕ ಆರೋಪಗಳನ್ನು ಮಾಡುತ್ತಾನೆಂದರೆ ಅದು ಹಾಸ್ಯಾಸ್ಪದ’ ಎಂದಿದ್ದಾರೆ. ಟ್ರುಡೊ ಹೇಳಿಕೆ ಬೂಟಾಟಿಕೆಯದ್ದು ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.