Advertisement

ಮಣ್ಣಿಲ್ಲದೇ ಸಸ್ಯ ಬೆಳೆಸಲು ಸಿದ್ಧತೆ! ಕೃತಕವಾಗಿ ರೆಟಿನಾ ತಯಾರಿಸುವ ಪ್ರಯೋಗವೂ ಆರಂಭ

07:55 PM Apr 27, 2022 | Team Udayavani |

ನವದೆಹಲಿ: ಅಮೆರಿಕದ ಸ್ಪೇಸ್‌ಎಕ್ಸ್‌ ಸಂಸ್ಥೆ ಹೊಸತೊಂದು ಸಾಹಸಕ್ಕೆ ಮುಂದಾಗಿದೆ. ಅದರ ನಾಲ್ಕು ಮಂದಿಯ ತಂಡ ಗುರುವಾರ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲಿದೆ.

Advertisement

ಈ ಗುಂಪು ನಿಲ್ದಾಣ ಮುಟ್ಟಿದ ಕೂಡಲೇ ಅಪರೂಪದ ಪ್ರಯೋಗವೊಂದನ್ನು ಮುಂದುವರಿಸಲಿದೆ. ಭೂಮಿಯಲ್ಲಿ ಸಸ್ಯಗಳನ್ನು ಬೆಳೆಸಲು ಮಣ್ಣು ಬೇಕು, ಬಾಹ್ಯಾಕಾಶದಲ್ಲಿ? ಮಣ್ಣಿಲ್ಲದೇ ಸಸ್ಯ ಬೆಳೆಸಲು ಮುಂದಾಗಿದೆ ಈ ತಂಡ. ಹಾಗಂತ ಇದು ಹೊಸ ಪ್ರಯೋಗವಲ್ಲ.

ಹಿಂದಿನ ತಂಡ ಆರಂಭಿಸಿದ್ದನ್ನು ಇದು ಮುಂದುವರಿಸಲಿದೆ. ರೋಚಕ ವಿಷಯವೆಂದರೆ ಬಾಹ್ಯಾಕಾಶದಲ್ಲಿ ವೃಕ್ಷಗಳನ್ನು ಬೆಳೆಸಲು ಮುಂದಾಗಿರುವುದು!

ಭೂಮಿಯಲ್ಲಿ ಗುರುತ್ವಾಕರ್ಷಣ ಶಕ್ತಿ ವಿಪರೀತವಾಗಿರುತ್ತದೆ. ಹಾಗಾಗಿ ಭೂಮಿಯಲ್ಲಿ ಸಸ್ಯಗಳಿಗೆ ಬೇರುಬಿಡಲಿಕ್ಕಾಗಿ, ಜೀವಸತ್ವಗಳಿಗಾಗಿ ಮಣ್ಣು ಅಥವಾ ನೆಲಬೇಕು. ಬಾಹ್ಯಾಕಾಶದಲ್ಲಿ ಗುರುತ್ವ ಬಲ ಇರದ ಕಾರಣ ಇಲ್ಲಿ ಮಣ್ಣನ್ನು ಬಳಸಲು ಸಾಧ್ಯವಿಲ್ಲ. ಸದ್ಯ ಬಾಹ್ಯಾಕಾಶದಲ್ಲಿ ಸಸ್ಯಗಳು ಸಣ್ಣದಾಗಿ ಬೆಳೆಯುತ್ತಿವೆ. ಇವಕ್ಕೆ ನೀರು, ಪೋಷಕಾಂಶಗಳನ್ನು ಮುಟ್ಟಿಸಲು ಬೇರೆ ಮಾರ್ಗವನ್ನು ಬಳಸಲಾಗುತ್ತಿದೆ. ಆದರೆ ಅಲ್ಲಿನ ವಸ್ತುಗಳ ತೂಕ ಕಡಿಮೆಯಿರುವುದು, ನಿರ್ದಿಷ್ಟ ಜಾಗದಲ್ಲಿ ಹಿಡಿಸುವುದು, ನಿರ್ವಹಣೆ, ಸ್ವತ್ಛತೆ ಮೊದಲಾದ ಸಮಸ್ಯೆಗಳಿಂದ ದೊಡ್ಡದಾಗಿ ಬೆಳೆಸಲು ಆಗುತ್ತಿಲ್ಲ. ಆದ್ದರಿಂದಲೇ ಬಾಹ್ಯಾಕಾಶ ವಿಜ್ಞಾನಿಗಳು ಹೈಡ್ರೊಪೊನಿಕ್‌ ಮತ್ತು ಏರೋಪೊನಿಕ್‌ ತಂತ್ರಜ್ಞಾನ ಬಳಸಿ ಸಸ್ಯಗಳನ್ನು ದೊಡ್ಡದಾಗಿ ಬೆಳೆಸಲು ಹೊರಟಿದ್ದಾರೆ.

ರೆಟಿನಾ ತಯಾರಿಸಲು ಸಿದ್ಧತೆ:
ಇನ್ನೊಂದು ವಿಚಾರ ಗೊತ್ತಾ? ಬಾಹ್ಯಾಕಾಶದಲ್ಲಿ ಇದೇ ತಂಡ ಕೃತಕವಾಗಿ ಕಣ್ಣಿನ ರೆಟಿನಾ ಸಿದ್ಧಪಡಿಸಲು ಹೊರಟಿದೆ. ಬ್ಯಾಕ್ಟೀರಿಯರ್‌ಹಾಡಾಪ್ಸಿನ್‌ ಎಂಬ ಪ್ರೊಟೀನ್‌ ಬಳಸಿಕೊಂಡು ರೆಟಿನಾ ಸಿದ್ಧಪಡಿಸಲು ಹೊರಡಲಾಗಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಭೂಮಿಯಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕೋಟ್ಯಂತರ ಮಂದಿ ಇದರ ಲಾಭ ಪಡೆಯಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next