ಕೇಪ್ ಟೌನ್: ಆಂತರಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ದಕ್ಷಿಣ ಆಫ್ರಿಕಾ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ ಅಮಾನತು ಮಾಡಿ ತನ್ನ ತೆಕ್ಕೆಗೆ ಪಡೆದಿದೆ. ಹರಿಣಗಳ ನಾಡಿನ ಈ ದಿಢೀರ್ ಬೆಳವಣಿಗೆಯಿಂದ ಆಟಗಾರರು ಆತಂಕಕ್ಕೆ ಒಳಗಾಗಿದ್ದಾರೆ, ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್ ನಲ್ಲಿ ಆಡಲು ಅವಕಾಶ ಸಿಗಲಿದೆಯೇ ಎನ್ನುವ ಪ್ರಶ್ನೆ ಎದ್ದಿದೆ.
ದಕ್ಷಿಣ ಆಫ್ರಿಕಾ ತಂಡದ ಆಟಗಾರರಾದ ಕಗಿಸೋ ರಬಾಡ, ಲುಂಗಿ ನಿಗಿಡಿ, ಫಾಫ್ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಡೇಲ್ ಸ್ಟೇನ್, ಇಮ್ರಾನ್ ತಾಹೀರ್, ಕ್ರಿಸ್ ಮೋರಿಸ್ ಮತ್ತು ಡೇವಿಡ್ ಮಿಲ್ಲರ್ ಈ ಬಾರಿಯ ಐಪಿಎಲ್ ನಲ್ಲಿ ಭಾಗವಹಿಸಲಿದ್ದಾರೆ.
ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಹರಿಣಗಳ ನಾಡಿನ ಆಟಗಾರರ ಸೇವೆ ಪಡೆಯಲಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿದ ದ. ಆಫ್ರಿಕಾ ಸರ್ಕಾರ!
ದ. ಆಫ್ರಿಕಾ ಕ್ರಿಕೆಟ್ ನ ಈ ಬೆಳವಣಿಗೆಯಿಂದ ಫ್ರಾಂಚೈಸಿಗಳಿಗೆ ತಲೆನೋವವಿಗೆ ಕಾರಣವಾಗಿದೆ. ಆದರೆ ಒಂದು ಮೂಲದ ಮಾಹಿತಿಯ ಪ್ರಕಾರ ಈ ಬೆಳವಣಿಗೆಯಿಂದ ಆಟಗಾರರಿಗೆ ಐಪಿಎಲ್ ನಲ್ಲಿ ಭಾಗವಹಿಸಲು ಯಾವುದೇ ಅಡ್ಡಿಯಿಲ್ಲ. ಇಂತಹ ಫ್ರಾಂಚೈಸಿ ಕೂಟಗಳಲ್ಲಿ ಆಟಗಾರರು ಭಾಗವಹಿಸಬಹುದು ಎನ್ನಲಾಗಿದೆ.