ಚಿಕ್ಕಮಗಳೂರು: ಮೋದಿ ಜಾಗದಲ್ಲಿ ಮತ್ತೊಬ್ಬರ ಕಲ್ಪನೆಯನ್ನೂ ಮಾಡಿಕೊಳ್ಳಲಾಗದು. ಹಾಗೆ ಕಲ್ಪನೆ ಮಾಡಿಕೊಂಡರೆ ಇಂದಿನ ಸ್ಥಿತಿ ಇನ್ನೂ ಗಂಭೀರವಾಗಿರುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸಭೆ ಕರೆದರೆ ಸಂವಿಧಾನಿಕ ಅಧಿಕಾರ ಇಲ್ಲ ಎನ್ನತ್ತೀರಿ. ಪ್ರಧಾನಿ ಸಭೆ ಕರೆದರೆ ಅವರೇನು ಹೆಡ್ ಮೇಷ್ಟ್ರೇ ಎನ್ನುತ್ತಾರೆ. ಸಿದ್ದರಾಮಯ್ಯನವರೇ, ಏನಾಗಿದೆ ನಿಮ್ಮ ತಲೆಗೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಸೈಯದ್ ಇಸಾಕ್ ಗ್ರಂಥಾಲಯಕ್ಕೆ 8243 ಪುಸ್ತಕಗಳ ದಾನ: ಸುರೇಶ್ ಕುಮಾರ್
ಇದು ರಾಜಕಾರಣ ಮಾಡುವ ಸಮಯವಲ್ಲ. ಇದು ಕರ್ತವ್ಯ ನಿರ್ವಹಿಸುವ ಸಂದರ್ಭ, ಅಧಿಕಾರ ಚಲಾಯಿಸುವುದಲ್ಲ ಎಂದರು ಸಿ.ಟಿ.ರವಿ ಹೇಳಿದರು.
ಇದನ್ನೂ ಓದಿ: ಕೋವಿಡ್ ಎದುರಿಸಿದ ನಂತರ ವೈಫಲ್ಯಗಳನ್ನು ಬೊಟ್ಟು ಮಾಡಿ ತೋರಿಸಲಿ: ಸಿ.ಟಿ.ರವಿ