Advertisement
ಶಾಂತಿಯುತವಾದ ಬೆಂಗಳೂರಿನಲ್ಲಿ ಇತ್ತೀಚೆಗೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮೊದಲು ನಿರ್ಭಯವಾಗಿ ಓಡಾಡುತ್ತಿದ್ದ ಸಾರ್ವಜನಿಕರು ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಗರದ ಎಲ್ಲ ನಾಗರೀಕರು ಶಾಂತಿಗಾಗಿ ಶ್ರಮಿಸಬೇಕಿದೆ. ಅಲ್ಲದೇ ಸರ್ಕಾರ ಹಾಗೂ ಗೃಹ ಇಲಾಖೆ ಕೂಡ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಒತ್ತಾಯಿಸಿದರು.
Related Articles
Advertisement
ಇದೇ ವೇಳೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಹಾಗೂ ಪೊಲೀಸರ ಕರ್ತವ್ಯದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಟಿಜನ್ ಫಾರ್ ಡೆಮಾಕ್ರಸಿ ರಾಜ್ಯ ಸಂಚಾಲಕ ರಾಜೇಶ್ ಪದ್ಮಾರ್, ರಾಧಕೃಷ್ಣ ಹೊಳ್ಳ, ಕ್ಯಾನ್ಸರ್ ರೋಗತಜ್ಞೆ ವಿಜಯಲಕ್ಷಿ ದೇಶಮಾನೆ, ಪತ್ರಕರ್ತ ದೂಗು ಲಕ್ಷ್ಮಣ್, ವೃಕ್ಷ ತಜ್ಞ ವಿಜಯ ನಿಶಾಂತ್, ನಟಿಯರಾದ ತಾರಾ, ಶೃತಿ, ಲಹರಿವೇಲು, ಮಾದಿಗ ದಂಡೊರ ಸಮಿತಿ ಮುಖ್ಯಸ್ಥ ಶಂಕರಪ್ಪ ಇತರರು ಇದ್ದರು.
“ನಾಟ್ ಮೈ ಬೆಂಗಳೂರು’: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ ಹಿನ್ನೆಲೆಯಲ್ಲಿ ಸಿಟಿಜನ್ ಫಾರ್ ಡೆಮಾಕ್ರಸಿ “ನಾಟ್ ಮೈ ಬೆಂಗಳೂರು’ ಎಂಬ ಟ್ವಿಟರ್ ಖಾತೆ ತೆರೆದಿದೆ. ಈ ಖಾತೆಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಟ್ವಿಟಿಗರು ಬೆಂಗಳೂರು ಮೊದಲು ಹೇಗಿತ್ತು. ಈಗ ಹೇಗಿದೆ ಎಂಬೆಲ್ಲ ವ್ಯಾಖ್ಯಾನ ನೀಡಿದ್ದಾರೆ. ಪೊಲೀಸರಿಗೆ ಸರ್ಕಾರ ಒತ್ತಡ ಹಾಕಬಾರದು. ಪ್ರಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂಬೆಲ್ಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
“ಶಾಂತಿಗಾಗಿ ಜನ ಧ್ವನಿ’: ಇದೇ ವೇಳೆ ಶಾಂತಿಗಾಗಿ ಜನ ಧ್ವನಿ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡ ಸುಮಾರು 400ಕ್ಕೂ ಅಧಿಕ ಮಂದಿ ಯುವ ಸಮೂಹ ಹಾಗೂ ಸಾರ್ವಜನಿಕರು ಸಹಿ ಮಾಡಿ ಬೆಂಗಳೂರಿನಲ್ಲಿ ಮತ್ತೆ ಶಾಂತಿ ಮರುಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.