Advertisement

ಮೋದಿಯಿಂದ ಪ್ರಚಾರ ಪಥ

06:35 AM Aug 14, 2017 | |

ಮುಂಬಯಿ: ಈಗಾಗಲೇ ಮೂರು ವರ್ಷಗಳ ಅವಧಿ ಪೂರೈಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರಕಾರ ಉಳಿದ ಎರಡು ವರ್ಷಗಳಲ್ಲಿ ಯಾವುದೇ ಸುಧಾರಣೆ ಕ್ರಮಗಳನ್ನು ಪರಿಚಯಿಸುವುದಿಲ್ಲ. ಬದಲಿಗೆ ಈಗಾಗಲೇ ತಾನು ಜಾರಿ ಗೊಳಿಸಿರುವ ಯೋಜನೆಗಳು, ಸಾಧನೆಗಳನ್ನು ಪ್ರಚಾರ ಮಾಡಿ, ಆ ಮೂಲಕ ಹೆಚ್ಚು “ಜನಸ್ನೇಹಿ’ ಯಾಗುವತ್ತ ಗಮನಹರಿಸಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 

Advertisement

“ಪ್ರಸ್ತುತ 2019ರ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡಿರುವ ಸರ್ಕಾರ ಇನ್ನು ಹೊಸ ಪ್ರಯತ್ನಗಳಿಗೆ ಕೈಹಾಕಲಾರದು. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ತಾವು ಆರಂಭಿಸಿರುವ ಮೂಲ ಸೌಲಭ್ಯ ಯೋಜನೆಗಳು ಹಾಗೂ ಕೈಗೊಂಡಿರುವ ನೋಟು ಅಮಾನ್ಯ ರೀತಿಯ ಸುಧಾರಣಾ ಕ್ರಮಗಳ ಯಶಸ್ಸಿನ ಕುರಿತು ಹೆಚ್ಚು ಮಾತನಾಡುವ ಮೂಲಕ ಜನರ ಮನಗೆಲ್ಲುವ ನಿರೀಕ್ಷೆಯಿದೆ. ಹಾಗೇ ಮುಖ್ಯವಾಗಿ ಆಡಳಿತ ಉತ್ತಮಗೊಳಿಸುವತ್ತ ಗಮನಹರಿಸಲಿರುವ ಸರಕಾರ, ಮುಂದಿನ ಎರಡು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ ಘೋಷಿಸುವ, ಕಾನೂನು ರೂಪಿಸುವ ಪ್ರಯತ್ನಕ್ಕೆ ಕೈಹಾಕಲಾರದು’ ಎಂದು ಬಾರ್ಕ್‌ಲೇಸ್‌ ಇಂಡಿಯಾದ ಪ್ರಮುಖ ಆರ್ಥಿಕ ತಜ್ಞ ಸಿದ್ಧಾರ್ಥ ಸನ್ಯಾಲ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

“ಇದೇ ವೇಳೆ 2019ರ ಚುನಾವಣೆ ಸಮೀ ಪಿ ಸಿದಂತೆ ಬಿಜೆಪಿಯ ‘ರಾಷ್ಟ್ರೀಯವಾದ’ವನ್ನು ಹೆಚ್ಚು ಪ್ರಚುರಪಡಿಸಲು ಗಮನಹರಿಸಲಿರುವ ಪ್ರಧಾನಿ ಮೋದಿ, ಸರಕಾರದ ಈವರೆಗಿನ “ಸುಧಾರಣಾವಾದ’ದ ದೃಷ್ಟಿಕೋನವನ್ನು ಸ್ವಲ್ಪ ದಿನಗಳ ಮಟ್ಟಿಗೆ ಬದಿಗಿರಿಸಲಿದ್ದಾರೆ’ ಎಂದು ಸಿದ್ಧಾರ್ಥ ಸನ್ಯಾಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next