Advertisement

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

10:46 PM Oct 18, 2021 | Team Udayavani |

ಇಂಡಿಯನ್ಸ್‌ ವೆಲ್ಸ್‌ (ಕ್ಯಾಲಿ ಫೋರ್ನಿಯಾ): ಇಂಡಿಯನ್‌ ವೆಲ್ಸ್‌ ಟೆನಿಸ್‌ ಪಂದ್ಯಾವಳಿ ಯಲ್ಲಿ ಬ್ರಿಟನ್‌ನ ಕ್ಯಾಮರಾನ್‌ ನೂರಿ ಮತ್ತು ಸ್ಪೇನಿನ ಪೌಲಾ ಬಡೋಸಾ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

ಇಬ್ಬರಿಗೂ ಇದು ಈ ಕೂಟದ ಮೊದಲ ಪ್ರಶಸ್ತಿಯಾಗಿದೆ. ಇಬ್ಬರೂ 3 ಸೆಟ್‌ಗಳ ಜಿದ್ದಾಜಿದ್ದಿ ಪೈಪೋಟಿ ನಡೆಸಿ ಗೆದ್ದು ಬಂದರು.

ಪುರುಷರ ಸಿಂಗಲ್ಸ್‌ನಲ್ಲಿ ಕ್ಯಾಮರಾನ್‌ ನೂರಿ ಜಾರ್ಜಿಯಾದ ನಿಕೋಲಸ್‌ ಬಾಸಿಲಶ್ವಿ‌ಲಿ ಅವರನ್ನು 3-6, 6-1, 6-1 ಅಂತರದಿಂದ ಮಣಿಸಿದರು.

ವನಿತೆಯರ ಸಿಂಗಲ್ಸ್‌ನಲ್ಲಿ ಪೌಲಾ ಬಡೋಸಾ ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ಅವರ ತೀವ್ರ ಸವಾಲನ್ನು ಮೆಟ್ಟಿನಿಂತು 7-6 (7-5), 2-6, 7-5 (7-2) ಅಂತರದ ಮೇಲುಗೈ ಸಾಧಿಸಿದರು.

ಇದನ್ನೂ ಓದಿ:ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next