Advertisement

ಧಾರವಾಡ ತಾಲೂಕು ಕಚೇರಿಗೆ ಕ್ಯಾಮೆರಾ ಕಣ್ಗಾವಲು

01:08 PM Nov 21, 2017 | Team Udayavani |

ಧಾರವಾಡ: ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಪಾರದರ್ಶಕ ಆಡಳಿತ ಹಾಗೂ ಮೇಲ್ವಿಚಾರಣೆಗೆ ಸಹಾಯಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು. 

Advertisement

ನಗರದ ಧಾರವಾಡ ತಾಲೂಕು ಕಚೇರಿಯಲ್ಲಿ ನೂತನವಾಗಿ ಆಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಕಚೇರಿ ಆವರಣದಲ್ಲಿರುವ ತಹಶೀಲ್ದಾರ್‌ ಕಾರ್ಯಾಲಯ, ಸಿಬ್ಬಂದಿ, ಆಹಾರ, ಭೂಮಿ ಹಾಗೂ ಶಾಖೆಗಳು, ಅಭಿಯಂತ ಇಲಾಖೆ, ಕೆಎಲ್‌ಆರ್‌ ವಿಭಾಗ, ರೆಕಾರ್ಡ್‌ ರೂಮ್‌ ಸೇರಿದಂತೆ ಒಟ್ಟು 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು. 

ಸಿಸಿಟಿವಿ ಅಳವಡಿಸಿರುವ ಮಾಡರ್ನ್ ಮಲ್ಟಿ ಟೆಕ್‌ ಕಂಪನಿಯು ನೂತನ ತಂತ್ರಜ್ಞಾನ ಬಳಸಿ ಜಿಡಿಎಂಸ್‌ ಮೊಬೈಲ್‌ ಆ್ಯಪ್‌ ಅಭಿವೃದ್ದಿ ಪಡಿಸಿದ್ದು, ಸಿಸಿಟಿವಿ ಕಾರ್ಯಚರಣೆಯನ್ನು ಮೊಬೈಲ್‌ನಿಂದಲೂ ವೀಕ್ಷಿಸಬಹುದು ಎಂದು ತಿಳಿಸಿದರು. ತಹಶೀಲ್ದಾರ್‌ ಪ್ರಕಾಶ ಕುದರಿ ಮಾತನಾಡಿ, ಸಿಸಿ ಟಿವಿಯನ್ನು 3ಲಕ್ಷ ವೆಚ್ಚದಲ್ಲಿ ಅಳವಡಿಸಲಾಗಿದ್ದು,

ಇದಕ್ಕೆ ಪ್ರತ್ಯೇಕವಾಗಿ ಯುಪಿಎಸ್‌, ಜನರೇಟರ್‌ಗಳು ಇವೆ. ಸಿಸಿಟಿವಿ ಅಳವಡಿಕೆಯಿಂದ ಕಚೇರಿ ಸಿಬ್ಬಂದಿಯಲ್ಲಿ ಶಿಸ್ತು ಮತ್ತು ಆಡಳಿತದಲ್ಲಿ ಪಾರದರ್ಶಕತೆ ಮೂಡುತ್ತದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾ ಧಿಕಾರಿ ಮಹೇಶ ಕರ್ಜಗಿ, ಕಂದಾಯ ನಿರೀಕ್ಷಕ ಶ್ರೀಧರ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next