ಹುಣಸೂರು: ಕುಡಿದ ಅಮಲಿನಲ್ಲಿ ಆನೆ ಮಾವುತನೋರ್ವ ನಡೆಸಿದ ಅವಾಂತರದಿಂದ ಅರಣ್ಯ ಸಿಬ್ಬಂದಿಗಳು ಹೈರಾಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕ ಹೆಜ್ಜೂರಿನಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಹುಣಸೂರು ತಾಲೂಕಿನ ಚಿಕ್ಕ ಹೆಜ್ಜೂರು ಹಾಡಿಯ ರಾಜು ಎಂಬಾತನೇ ಈ ಅವಾಂತರ ಸೃಷ್ಟಿದ ವ್ಯಕ್ತಿ.
ನಾಗರಹೊಳೆ ಉದ್ಯಾನದಲ್ಲಿ ಅಭಿಮನ್ಯು ಆನೆ ಮಾವುತನಾಗಿರುವ ಈತ ಯುಗಾದಿ ಹಬ್ಬಕ್ಕಾಗಿ ಸ್ವಗ್ರಾಮ ಚಿಕ್ಕ ಹೆಜ್ಜೂರಿಗೆ ಬಂದಿದ್ದ. ಕಂಠಪೂರ್ತಿ ಮದ್ಯ ಸೇವಿಸಿದ್ದ ರಾಜು, ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ನಮನ್ ನಾರಾಯಣ್ ನಾಯಕರಿಗೆ ಪೋನಾಯಿಸಿ ಚಿಕ್ಕ ಹೆಜ್ಜೂರು ಹಾಡಿ ಮಂದಿ ಆನೆ ದಂತವನ್ಬು ಬಚ್ಚಿಟ್ಟಿದ್ದಾರೆಂದು ಮಾಹಿತಿ ನೀಡಿದ್ದಾನೆ. ಮಾಹಿತಿ ಮೇರೆಗೆ ಹಾಡಿಗೆ ದೌಡಾಯಿಸಿದ ಅರಣ್ಯ ಸಿಬ್ಬಂದಿಗಳು ಹಾಡಿಯಲ್ಲಿ ತನಿಖೆ ನಡೆಸಿದರೂ, ದಂತ ಪತ್ತೆಯಾಗದೆ ಬರಿಗೈಲಿ ವಾಪಸ್ಸಾಗಿದ್ದರೆ.
ಇದನ್ನೂ ಓದಿ:ರೇವ್ ಪಾರ್ಟಿಗೆ ಪೊಲೀಸ್ ದಾಳಿ; ಚಿರಂಜೀವಿ ಸೊಸೆ, ಬಿಗ್ ಬಾಸ್ ವಿನ್ನರ್ ಸೇರಿ 142 ಜನರ ಬಂಧನ
ವಿನಾಕಾರಣ ಹಾಡಿಯವರ ಮೇಲೆ ದಂತ ಬಚ್ಚಿಟ್ಟಿರುವ ಬಗ್ಗೆ ದೂರು ನೀಡಿರುವ ರಾಜುವಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹುಣಸೂರು ಗ್ರಾಮಾಂತರ ಪೊಲೀಸರಿಗೆ ಹಾಡಿಯ ಯಜಮಾನರು ದೂರು ನೀಡಿದ್ದಾರೆ.