ಸಿರಿಧಾನ್ಯ, ಸಾವಯವ ಆಹಾರಕ್ರಮ ಇದೀಗ ಮಹಾನಗರದ ಬದುಕಿನ ಭಾಗವಾಗಿದೆ. ಇಂಟರ್‌ನ್ಯಾಶನಲ್ ಕಂಪಟೆನ್ಸ್ ಸೆಂಟರ್ ಫಾರ್ ಆಗ್ಯಾನಿಕ್ ಅಗ್ರಿಕಲ್ಚರ್ ಹಾಗೂ ಬಿಬಿಎಂಪಿ ಸಹಯೋಗದಲ್ಲಿ “ಬೆಂಗಳೂರು ಸಾವಯವ ಸಂತೆ’ ಹಮ್ಮಿಕೊಳ್ಳಲಾಗಿದೆ.
ಎರಡು ದಿನಗಳ ಈ ಮೇಳದಲ್ಲಿ 40- 50 ಸಾವಯವ ಕಂಪನಿಗಳು, ರೈತರು ಭಾಗವಹಿಸಿ ಎಲ್ಲ ಬಗೆಯ ಸಾವಯವ ತರಕಾರಿ, ಹಣ್ಣು, ಪದಾರ್ಥಗಳು ಪ್ರದರ್ಶನಕ್ಕೆ ಇಡಲಿದ್ದಾರೆ. ಉತ್ತರಖಂಡ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಿಂದ ಸಾವಯವ ಬೆಳೆ ಬೆಳೆದ ರೈತರು ಕೂಡ ಮೇಳದಲ್ಲಿ ಈ ಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾವಯವ ಹಣ್ಣು, ತರಕಾರಿ, ಹಾಲು, ಡೈರಿ ಪದಾರ್ಥ, ಕಾಸೆಟಿಕ್ಸ್, ಡಯೆಟ್ ಪದಾರ್ಥಗಳ ಮಾರಾಟ ಇರಲಿದೆ. ಸಾವಯವ ಪದಾರ್ಥಗಳ ಖಾದ್ಯ ರುಚಿಯನ್ನೂ ಸ್ಥಳದಲ್ಲಿಯೇ ಸವಿಯಬಹುದು.
ಎಲ್ಲಿ?: ಬಿಬಿಎಂಪಿ ಆಟದ ಮೈದಾನ, ಬೆಥನಿ ಶಾಲೆ ಸಮೀಪ, ಕೋರಮಂಗಲ 5ನೇ ಬ್ಲಾಕ್
ಯಾವಾಗ?: ಜು.7-8, ಬೆ.9.30ರಿಂದ ರಾ.8
ಪ್ರವೇಶ: ಉಚಿತ