Advertisement

“ಹಿಂದೂ” ಬದಲು “ವೀರಶೈವ ಲಿಂಗಾಯತ” ಬಳಸಲು ಕರೆ

08:21 AM Dec 25, 2023 | Pranav MS |

ದಾವಣಗೆರೆ: ಜನ ಗಣತಿ ವೇಳೆ ವೀರಶೈವ ಲಿಂಗಾ ಯತರೆಲ್ಲರೂ ಧರ್ಮದ ಕಾಲಂ ನಲ್ಲಿ “ಹಿಂದೂ” ಎಂದು ಬರೆಸದೆ “ವೀರಶೈವ ಅಥವಾ ಲಿಂಗಾಯತ” ಎಂದೇ ಬರೆಸಬೇಕು ಎಂಬುದಾಗಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಧಿವೇಶನದ ಸಮಾರೋಪದ ದಿನವಾದ ರವಿ ವಾರ ವೀರಶೈವ ಲಿಂಗಾಯತ
ಸಮುದಾಯದ ಎಲ್ಲ ಒಳ ಪಂಗಡಗಳು ಒಂದಾಗಬೇಕುಎಂಬ ಒಕ್ಕೊರಲಿನ ಆಗ್ರಹ ಕೇಳಿ ಬಂದಿದ್ದು, ಜತೆಗೆ ಸ್ವತಂತ್ರ ಧರ್ಮದ ಕೂಗು ಕೂಡ ಮೊಳಗಿತು.

Advertisement

ಮಹಾ ಅಧಿವೇಶನದ ಸಮಾರೋಪದಲ್ಲಿ ಮಾತ ನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಬಹಳ ವರ್ಷಗಳಿಂದ ಹೋರಾಟ ನಡೆದಿದ್ದು ಇದಕ್ಕೆ ನನ್ನ ಸಂಪೂರ್ಣ ಬೆಂಬಲ, ಸಹಕಾರ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next