Advertisement

ಕೋವಿಡ್‌: ಕೈದಿಗಳಿಗೆ ಬಿಡುಗಡೆ ಭಾಗ್ಯ

03:17 PM Jul 12, 2020 | sudhir |

ಲಾಸ್‌ಏಂಜಲೀಸ್‌: ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೈದಿಗಳೀಗ ಬಿಡುಗಡೆ ಭಾಗ್ಯ ಕಾಣುತ್ತಿದ್ದಾರೆ. ಅಮೆರಿಕದ ಹೆಚ್ಚಿನ ಜೈಲುಗಳು ಅಪರಾಧಿಗಳಿಂದ ತುಂಬಿದ್ದು, ಸೋಂಕು ಒಂದೊಮ್ಮೆ ಪ್ರವೇಶಿಸಿದರೆ, ಸಾವಿರಾರು ಮಂದಿ ಸಂಕಷ್ಟಕ್ಕೀಡಾಗುವ ಭೀತಿ ಇದೆ.

Advertisement

ಆಗಸ್ಟ್‌ ವೇಳೆಗೆ ಸುಮಾರು 8 ಸಾವಿರ ಕೈದಿಗಳನ್ನು ಬಿಡಲು ಉದ್ದೇಶಿಸಲಾಗಿದೆ. ಈಗಾಗಲೇ ಸುಮಾರು 10 ಸಾವಿರ ಮಂದಿಯನ್ನು ಜೈಲಿನಿಂದ ಕಳಿಸಲಾಗಿದೆ. ಈಗ ಜೈಲಿನಿಂದ ಬಿಡುಗಡೆಯಾಗುವವರು ಕ್ಯಾಲಿಫೋರ್ನಿಯಾದ ಜೈಲುಗಳಲ್ಲಿದ್ದಾರೆ ಎಂದು ಕ್ಯಾಲಿಫೋರ್ನಿಯಾ ಬಂದೀಖಾನೆ ಮತ್ತು ಪುನರ್ವಸತಿ ಇಲಾಖೆ ಹೇಳಿದೆ. ಜೈಲುಗಳಲ್ಲಿರುವ ಕೈದಿಗಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇಲ್ಲಿರುವ ಜೈಲು ಸಿಬಂದಿಗೂ ಸೋಂಕಿನ ಭೀತಿಯಿದ್ದು, ಹಲವರು ಜೈಲಿನಿಂದ ತೆರವಾಗುವುದರಿಂದ ಅವರ ಆರೋಗ್ಯ ಸಂರಕ್ಷಣೆಯ ಕೆಲಸವೂ ಆಗಲಿದೆ.

ಈಗಾಗಲೇ ಕ್ಯಾಲಿಫೋರ್ನಿಯಾದ ವಿವಿಧ ಜೈಲುಗಳಲ್ಲಿ ಕೈದಿಗಳ ಪರೀಕ್ಷೆ ಮಾಡಲಾಗಿದ್ದು ಸುಮಾರು 1 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ.

ಏತನ್ಮಧ್ಯೆ ಸಾನ್‌ ಕ್ವಾಂಟೈನ್‌ ಜೈಲಿನಲ್ಲಿ ಸುಮಾರು 1.13 ಲಕ್ಷ ಮಂದಿ ಇದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಂದ ಹಲವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮೊದಲು ಬಿಡುಗಡೆಯಾದವರಿಗೆ ಪಾಸಿಟಿವ್‌ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next