ಮಾಂಟೆರರಿ ಪಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಡಾನ್ಸ್ ಕ್ಲಬ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆಸಿದಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನನ್ನು 72 ವರ್ಷದ ಹು ಕಾನ್ ಟ್ರಾನ್ ಎಂದು ಗುರುತಿಸಲಾಗಿದೆ.
Advertisement
ಚೀನ ಹೊಸ ವರ್ಷಾಚರಣೆ ವೇಳೆ ಕ್ಲಬ್‌ಗ ನುಗ್ಗಿ ಏಕಾಏಕಿ ಗುಂಡು ಹಾರಿಸಿ ಹತ್ತು ಮಂದಿಯ ಸಾವಿಗೆ ಆತ ಕಾರಣನಾಗಿದ್ದ. ತಪ್ಪಿಸಿಕೊಂಡಿದ್ದ ಆತನನ್ನು ಪೊಲೀಸರು ಹಿಂಬಾಲಿಸಿದ್ದರು.
ತನ್ನನ್ನು ಬಂಧಿಸಲಿದ್ದಾರೆ ಎಂಬ ಭೀತಿಯಿಂದ ಆತನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯಲ್ಲಿ ಇತರರು ಯಾರೂ ಭಾಗಿಯಾಗಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
Related Articles
Advertisement