Advertisement

ಲಾಕ್ ಡೌನ್: ಟಾಯ್ಲೆಟ್ ಪೇಪರ್ ಅಡಗಿಸಿ ಇಟ್ಟಿದ್ದಕ್ಕೆ ತಾಯಿ ಮೇಲೆ ಹಲ್ಲೆ, ಮಗ ಅರೆಸ್ಟ್!

09:15 AM Apr 11, 2020 | Nagendra Trasi |

ಲಾಸ್ ಏಂಜಲೀಸ್: ಕೋವಿಡ್ 19 ಸೋಂಕು ತಡೆಯಲು ಲಾಕ್ ಡೌನ್ ಘೋಷಿಸಿರುವ ಸಂದರ್ಭದಲ್ಲಿ ಟಾಯ್ಲೆಟ್ ಪೇಪರ್ ಅನ್ನು ಅಡಗಿಸಿ ಇಟ್ಟಿರುವುದಕ್ಕೆ ಆಕ್ರೋಶಗೊಂಡ ಮಗ ತಾಯಿ ಮೇಲೆ ಹಲ್ಲೆ ನಡೆಸಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದ್ದು, ಈ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಉತ್ತರ ಲಾಸ್ ಏಂಜಲೀಸ್ ನ ಸೌಗಸ್ ಮನೆಯಲ್ಲಿ ಟಾಯ್ಲೆಟ್ ಪೇಪರ್ ಗಾಗಿ ಮಗ ಮತ್ತು ತಾಯಿ ನಡುವೆ ಜಗಳ ಆರಂಭವಾಗಿತ್ತು. ಇದು ತಾರಕ್ಕೇರಿದ ವೇಳೆ ಮನೆಯವರು ದೂರವಾಣಿ ಕರೆ ಮಾಡಿ ತಿಳಿಸಿರುವುದಾಗಿ ಸಾಂತಾ ಕ್ಲಾರಿಟಾ ವ್ಯಾಲಿ ಶರೀಫ್ ಠಾಣೆಯ ವಕ್ತಾರ ಷರಿಲೈ ಮಿಲ್ಲರ್ ತಿಳಿಸಿದ್ದಾರೆ.

26 ವರ್ಷದ ಪುತ್ರ ಅಡ್ರಿಯನ್ ಯ್ಯಾನ್ ಹಾಗೂ ತಾಯಿ ನಡುವೆ ವಾಕ್ಸಮರ ನಡೆಯುತ್ತಿದ್ದ ವೇಳೆ, ಮಗ ತಾಯಿಯ ಮುಖಕ್ಕೆ ಹೊಡೆದಿದ್ದ. ಹಲ್ಲೆ ಪ್ರಕರಣದ ಆರೋಪದ ಮೇಲೆ ಮಗನನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.

ಕೋವಿಡ್ 19 ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಅಲ್ಲದೇ ಟಾಯ್ಲೆಟ್ ಪೇಪರ್ ಉತ್ಪಾದನೆ ಕಡಿಮೆಯಾಗಿದ್ದು, ಸರಬರಾಜು ನಿಂತಿದೆ. ಹೀಗಾಗಿ ನನ್ನ ಮಗ ಅತೀಯಾಗಿ ಟಾಯ್ಲೆಟ್ ಪೇಪರ್ ಬಳಲಸುತ್ತಿದ್ದ ಕಾರಣ ಅಡಗಿಸಿ ಇಟ್ಟಿರುವುದಾಗಿ ತನಿಖಾಧಿಕಾರಿಗಳಿಗೆ ವಿವರಣೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next