Advertisement

ಆಹಾರ ಭದ್ರತಾ ಯೋಜನೆಗೆ ಹೊಸ ಹೆಸರು; ಕೇಂದ್ರ ಸಂಪುಟದಿಂದ ಅನುಮೋದನೆ

09:47 PM Jan 11, 2023 | Team Udayavani |

ನವದೆಹಲಿ: ದೇಶದ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ ಒದಗಿಸುವ ಕೇಂದ್ರ ಸರ್ಕಾರದ ಸಮಗ್ರ ಆಹಾರ ಭದ್ರತಾ ಯೋಜನೆಗೆ “ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ’ (ಪಿಎಂಜಿಕೆಎವೈ) ಎಂದು ನಾಮಕರಣ ಮಾಡಿದೆ.

Advertisement

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪಿಎಂಜಿಕೆಎವೈ ಅಡಿ ಜ.1ರಿಂದ ಪ್ರತಿ ಬಡವನಿಗೆ ಪ್ರತಿ ತಿಂಗಳು ತಲಾ 5 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ. ಅಂತ್ಯೋದಯ ಅನ್ನ ಯೋಜನೆ(ಎಎವೈ) ಅಡಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ.

ಉಚಿತ ಆಹಾರ ಧಾನ್ಯ ವಿತರಣೆ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಪ್ರತಿಪಕ್ಷಗಳು ಟೀಕೆ ನಡೆಸಿದ ಬೆನ್ನಲ್ಲೇ ಈ ತೀರ್ಮಾನ ಪ್ರಕಟಿಸಲಾಗಿದೆ.

ಹೊಸ ಸಹಕಾರಿ ಸಂಘಗಳು:
ಸಾವಯವ ಉತ್ಪನ್ನಗಳು, ಬೀಜಗಳು ಮತ್ತು ರಫ್ತು ಉತ್ತೇಜಿಸಲು ಮೂರು ನೂತನ ಬಹು ರಾಜ್ಯ ಸಹಕಾರಿ ಸಂಘಗಳ ಸ್ಥಾಪನೆಗೆ ಕೂಡ ಅನುಮೋದನೆ ನೀಡಲಾಗಿದೆ. ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2022ರ ಅಡಿಯಲ್ಲಿ ರಾಷ್ಟ್ರ ಮಟ್ಟದ ಸಹಕಾರಿ ಸಾವಯವ ಸಂಘ, ಸಹಕಾರಿ ಬೀಜ ಸಂಘ ಮತ್ತು ಸಹಕಾರಿ ರಫ್ತು ಸಂಘಗಳು ನೋಂದಣಿಯಾಗಲಿವೆ.

Advertisement

ಉತ್ತೇಜನ:
ರುಪೇ ಡೆಬಿಟ್‌ ಕಾರ್ಡ್‌ ಮತ್ತು ಕಡಿಮೆ ಮೌಲ್ಯದ ಭೀಮ್‌-ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು 2,600 ಕೋಟಿ ರೂ.ಗಳ ಯೋಜನೆಗೆ ಸಮ್ಮತಿಸಲಾಗಿದೆ. ಪಾಯಿಂಟ್‌ ಆಫ್ ಸೇಲ್ಸ್‌ ಮಷಿನ್‌ಗಳ ಬಳಕೆಗೆ ಪ್ರಾಧಾನ್ಯತೆ ನೀಡಿ, ಡಿಜಿಟಲ್‌ ಪಾವತಿ ಕ್ಷೇತ್ರಕ್ಕೆ ಉತ್ತೇಜನ ಇದರಿಂದ ಸಿಗಲಿದೆ. ಜತೆಗೆ ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಮೂಲಕವೂ ರುಪೇ ಕಾರ್ಡ್‌, ಭೀಮ್‌-ಯುಪಿಐ ಮೂಲಕವೂ ಪಾವತಿಗೆ ಆದ್ಯತೆ ಸರ್ಕಾರದ ನಿರ್ಧಾರದಿಂದ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next