Advertisement

ಕೇಂದ್ರ ನೌಕರರಿಗೆ ಶೇ.2 ತುಟ್ಟಿಭತ್ಯೆ ಹೆಚ್ಚಳ

08:15 AM Mar 08, 2018 | |

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿ.ಎ) ಪ್ರಮಾಣವನ್ನು ಶೇ.5ರಿಂದ ಶೇ.7ಕ್ಕೆ ಹೆಚ್ಚಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. 48.41 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮತ್ತು 61.17 ಲಕ್ಷ ಪಿಂಚಣಿದಾರರಿಗೆ  ಈ ನಿರ್ಧಾರ ಅನುಕೂಲವಾಗಲಿದೆ.  ಈ ವರ್ಷದ ಜನವರಿ 1ರಿಂದ ಪೂರ್ವಾನ್ವಯವವಾಗಿ ನಿರ್ಧಾರ ಜಾರಿಯಾಗಲಿದೆ. ಅಗತ್ಯ ವಸ್ತುಗಳ ದರ ಏರಿಕೆಯಾಗಿದ್ದರಿಂದ ಪರಿಹಾರಾತ್ಮಕ ಕ್ರಮವಾಗಿ ಹೆಚ್ಚುವರಿ ಶೇ.2ರಷ್ಟು ಡಿ.ಎ. ಪರಿಷ್ಕರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆ ಮುಂದಾಗಿದೆ. ಸಂಪುಟದ ನಿರ್ಧಾರದಿಂದಾಗಿ ಪ್ರತಿ ವರ್ಷ ಬೊಕ್ಕಸಕ್ಕೆ  6,077 ಕೋಟಿ ರೂ., ಪಿಂಚಣಿದಾರರಿಗೆ ನೀಡುವ ಡಿಯರ್ನೆಸ್‌ ರಿಲೀಫ್ನಿಂದಾಗಿ 7,090.68 ಕೋಟಿ ರೂ. ಹೊರೆಯಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next