Advertisement

ಕೊನೆಗೂ ಏರಿಂಡಿಯಾ ಮಾರಾಟಕ್ಕೆ ಕೇಂದ್ರ ಸಂಪುಟದ ತಾತ್ವಿಕ ಒಪ್ಪಿಗೆ

07:32 PM Jun 28, 2017 | udayavani editorial |

ಹೊಸದಿಲ್ಲಿ : ಭಾರತ ಸರಕಾರದ ‘ಮಹಾರಾಜ’ ಎಂದೇ ಖ್ಯಾತಿವೆತ್ತ, ಅತ್ಯಂತ ಪ್ರತಿಷ್ಠೆಯ ವಾಯುಯಾನ ಸಂಸ್ಥೆಯಾಗಿರುವ ಏರಿಂಡಿಯಾ ಮಾರಾಟಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ತಾತ್ವಿಕ ಒಪ್ಪಿಗೆ ನೀಡಿದೆ. 

Advertisement

ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರಿಂದು ಮಾತನಾಡುತ್ತಾ, “ಏರಿಂಡಿಯಾದಂತೆ ಇನ್ನು ಕೆಲವು ಸಂಸ್ಥೆಗಳು ಖಾಸಗೀಕರಣದ ಮಾರ್ಗವನ್ನು ಹಿಡಿಯಲಿವೆ; ಅಂತಹವುಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದರು. 

2012ರಲ್ಲಿ ಮನಮೋಹನ್‌ ಸಿಂಗ್‌ ಸರಕಾರವು 10 ವರ್ಷಗಳ ಅವಧಿಗೆ ಹರಡಿಸಿ ಕೊಟ್ಟ 30,000 ಕೋಟಿ ರೂ.ಗಳ ಪ್ಯಾಕೇಜ್‌ ಆಧಾರದಲ್ಲಿ ಏರಿಂಡಿಯಾ ಈ ವರೆಗೆ ಬದುಕುಳಿದಿದ್ದು ತನ್ನ ಹಣಕಾಸು ಸ್ಥಿತಿಯನ್ನು ಸುಧಾರಿಸುವ ದಿಶೆಯಲ್ಲಿ ಅದು ಯತ್ನಿಸುತ್ತಲೇ ಬಂದಿದೆ. 

ಕಡಿಮೆ ಮಟ್ಟದ ಕಚ್ಚಾ ತೈಲ ಬೆಲೆ ಹಾಗೂ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಏರಿದ ಕಾರಣ 2015-16ರಲ್ಲಿ ಏರಿಂಡಿಯಾ 105 ಕೋಟಿ ರೂ. ನಿರ್ವಹಣಾ ಲಾಭವನ್ನು ಗಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next