Advertisement

ಸಂಪುಟ ಸಮಿತಿಗೆ ಇರಾನಿ, ಸೋನೊವಾಲ್‌

02:30 AM Jul 14, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸಂಪುಟ ಪುನಾ­ರಚನೆಯ ಬೆನ್ನಲ್ಲೇ , ಮಹತ್ವದ ಸಂಪುಟ ಸಮಿತಿಗಳನ್ನು ಪುನರಾಚಿಸಲಾ­ಗಿದೆ. ಕೇಂದ್ರ ಸಚಿವೆ ಸ್ಮತಿ ಇರಾನಿ, ಭೂಪೇಂ­ದರ್‌ ಯಾದವ್‌ ಹಾಗೂ ಸರ್ಬಾನಂದ ಸೋನೊವಾಲ್‌ ಅವರಿಗೆ ರಾಜಕೀಯ ವ್ಯವಹಾರಗಳಿಗಾಗಿ ಇರುವ ಸಂಪುಟ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

Advertisement

ಈ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್‌, ನರೇಂದ್ರ ಸಿಂಗ್‌ ತೋಮರ್‌, ಸ್ಮತಿ ಇರಾನಿ, ಪಿಯೂಶ್‌ ಗೋಯಲ್‌, ಪ್ರಹ್ಲಾದ್‌ ಜೋಶಿ, ಸರ್ಬಾನಂದ ಸೋನೊವಾಲ್‌, ಗಿರಿರಾಜ್‌ ಸಿಂಗ್‌, ಮನಸುಖ್‌ ಮಾಂಡ ವೀಯ, ಭೂಪೇಂದರ್‌ ಯಾದವ್‌ ಇದ್ದಾರೆ. ಅವರ ಜತೆಗೆ ನೂತನವಾಗಿ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ, ಅಶ್ವಿ‌ನಿ ವೈಷ್ಣವ್‌ ಅವರನ್ನು ಹೂಡಿಕೆ, ಬೆಳವಣಿಗೆಗಾಗಿನ ಸಂಪುಟ ಸಮಿತಿಗೆ ಸೇರ್ಪಡೆಗೊಳಿಸ ಲಾಗಿದೆ.

ಉದ್ಯೋಗ ಮತ್ತು ಕೌಶಲಾ ಭಿವೃದ್ಧಿ ಸಮಿತಿಯಲ್ಲೂ ಅಶ್ವಿ‌ನಿ ವೈಷ್ಣವ್‌ ಇದ್ದಾರೆ. ರಕ್ಷಣೆ ಹಾಗೂ ಆಂತರಿಕ ಭದ್ರತೆ ಕುರಿತಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ರಕ್ಷಣ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಹಾಗೂ ನೇಮಕಾತಿ ಸಮಿತಿಯಲ್ಲಿ ಬದಲಾವಣೆ ಮಾಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next