Advertisement

ಅಣೆಕಟ್ಟು ಅಭಿವೃದ್ಧಿ: ಕರ್ನಾಟಕಕ್ಕೆ 581 ಕೋಟಿ ರೂ. ನೆರವು

06:00 AM Sep 20, 2018 | Team Udayavani |

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಆಣೆಕಟ್ಟೆ ನವೀಕರಣಕ್ಕಾಗಿ ಕೇಂದ್ರ ಸರಕಾರ ಮೀಸಲಿಟ್ಟಿರುವ ಮೊತ್ತವನ್ನು ಹೆಚ್ಚಿಸಿದೆ. 3466 ಕೋಟಿ ರೂ.ಅನ್ನು ಒಟ್ಟು ಯೋಜನೆಗೆ ಮೀಸಲಿರಿಸಲಾಗಿದ್ದು, ಕರ್ನಾಟಕಕ್ಕೆ ಈ ಯೋಜನೆ ಅಡಿಯಲ್ಲಿ 22 ಆಣೆಕಟ್ಟೆಗಳ ಅಭಿವೃದ್ಧಿಗಾಗಿ 581 ಕೋಟಿ ರೂ. ಸಿಗಲಿದೆ. ಈ ಹಿಂದಿನ ಯೋಜನೆ ಅಡಿಯಲ್ಲಿ 276 ಕೋಟಿ ರೂ. ಮೀಸಲಿಡಲಾಗಿತ್ತು. ಈ ಯೋಜನೆಗೆ 2628 ಕೋಟಿ ರೂ. ಅನ್ನು ವಿಶ್ವಬ್ಯಾಂಕ್‌ ನೀಡಲಿದ್ದು, 747 ಕೋಟಿ ರೂ.ಗಳನ್ನು ರಾಜ್ಯಗಳು ಹಾಗೂ ಬಾಕಿ 91 ಕೋಟಿ ರೂ.ಗಳನ್ನು ಕೇಂದ್ರ ಜಲ ಆಯೋಗ ಒದಗಿಸಲಿದೆ.

Advertisement

ವೇತನ ಹೆಚ್ಚಳಕ್ಕೆ ಸಮ್ಮತಿ: ಈಗಾಗಲೇ ಜಾರಿಗೊಂಡಿರುವ ಆಶಾ ಕಾರ್ಯಕರ್ತೆಯರ ವೇತನವನ್ನು 1 ಸಾವಿರ ರೂ.ಗಳಿಂದ  2 ಸಾವಿರ ರೂ.ಗಳಿಗೆ ಹೆಚ್ಚಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಈ ಸೌಲಭ್ಯ ಸಿಗಲಿದೆ. ಅಲ್ಲದೆ ಇವರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆಯ ಲಾಭ ಪಡೆಯಲೂ ಅವಕಾಶ ಕಲ್ಪಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಘೋಷಣೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next